Publish Date: Fri, 17 Mar 2017 (10:15 IST)
Updated Date: Fri, 17 Mar 2017 (10:20 IST)
ತುಮಕೂರು: ಈ ಬಸ್ ಚಾಲಕ ಸಾವಿನಲ್ಲೂ ಸಾಹಸ ಮಾಡಿದ್ದಾರೆ. ತಾನು ಸಾಯುವ ಸ್ಥಿತಿಯಲ್ಲಿದ್ದರೂ, ಸಮಯಪ್ರಜ್ಞೆ ಮೆರೆದು ತನ್ನ ಬಸ್ ನಲ್ಲಿದ್ದ 50 ಪ್ರಯಾಣಿಕರ ಜೀವ ಉಳಿಸಿದ್ದಾರೆ.
ಇದು ನಡೆದಿರುವುದು ತುಮಕೂರಿನ ಲಕ್ಕನ ಹಳ್ಳಿ ಎಂಬಲ್ಲಿ. ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕ ನಾಗರಾಜ್ ಗೆ ಹೃದಯಾಘಾತವಾಗಿತ್ತು. ಆ ಸಂದರ್ಭದಲ್ಲಿ ಅವರು ಸಮಯ ಪ್ರಜ್ಞೆ ಮೆರೆಯದೇ ಇದ್ದಿದ್ದರೆ ಅಲ್ಲೇ ಇದ್ದ ಸೇತುವೆಯಿಂದ ಬಸ್ ಕೆಳಗುರುಳುವ ಅಪಾಯವಿತ್ತು.
ಆದರೆ ಬಸ್ ಒಂದು ಬದಿಗೆ ನಿಲ್ಲಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿರಿಸಿಯೇ ಪ್ರಾಣ ಬಿಟ್ಟಿದ್ದಾರೆ. ಆದರೂ, ಬಸ್ ನಲ್ಲಿದ್ದ ಪ್ರಯಾಣಿಕರು ಚಾಲಕನನ್ನು ಆಸ್ಪತ್ರೆಗೆ ಸಾಗಿಸಿದರೂ, ಪ್ರಯೋಜನವಾಗಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ