ಆಗಸ್ಟ್ ಮೊದಲವಾರವನ್ನು ಸ್ತನ್ಯಪಾನ ಸಪ್ತಾಹವೆಂದು ಆಚರಿಸಲಾಗುತ್ತದೆ. ಹಾಲುಣಿಸುವ ಮಹಿಳೆಯರಿಗೆ ಕೋವಿಡ್ ವರದಾನವಾಗಿ ಪರಿಣಮಿಸಿದೆ. ಹಿಂದೆಲ್ಲಾ ಕೆಲಸದ ಒತ್ತಡಕ್ಕೆ ಸಿಲುಕಿ ಮಕ್ಕಳಿಗೆ ಹಾಲುಣಿಸಲು ಸಮಯದ ಅಭಾವ ಕಾಡುತ್ತಿತ್ತು. ಆದರೆ ಈಗ
ಜನಿಸಿದ ಒಂದು ಗಂಟೆಯಲ್ಲೇ ಹಾಲು ನೀಡಿ: ಮಗುವಿನ ಆರೋಗ್ಯಕರ ಬೆಳವಣಿಗೆಗೆ ಮಗು ಜನಿಸಿದ ಒಂದು ಗಂಟೆಯೊಳಗಾಗಿ ಹಾಲುಣಿಸಿದರೆ ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳವಾಗಲು ಸಹಕಾರಿಯಾಗಲಿದೆ. ಮೊದಲ 3 ದಿನ ಬರುವ ಗೀಬಿನ ಹಾಲು( ಕೊಲೊಸ್ಟ್ರೋಮ್) ಮಗುವಿಗೆ ಎನರ್ಜಿ ಬೂಸ್ಟರ್ ಆಗಿ ಕೆಲಸ ಮಾಡಲಿದೆ. ಕೊಲೊಸ್ಟ್ರೋಮ್‌ನಲ್ಲಿ ಪೌಷ್ಠಿಕಾಂಶ ಉತ್ಕೃಷ್ಟವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಮುಂಬರುವ ದೀರ್ಘಕಾಲಿನ ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ತಾಯಿಯು ಮಗುವಿಗೆ ಹಾಲುಣಿಸಲು ಪ್ರಾರಂಭಿಸಿದ ಪ್ರಾರಂಭದಲ್ಲಿ ಹಳದಿ ವರ್ಣದ ಗಟ್ಟಿಹಾಲು ಬರುತ್ತದೆ. ಇದು ಮಗುವಿನ ಬೆಳವಣಿಗೆ ಮೊದಲ ಲಸಿಕೆ ಇದ್ದಂತೆ.
ಹಾಲು ಬಿಟ್ಟು ಬೇರೇನ್ನೂ ನೀಡಬೇಡಿ: ಮಕ್ಕಳ ಬೆಳವಣಿಗೆಗೆ ಕೆಲವರು ಎದೆಹಾಲಿನ ಜೊತೆಗೆ ಜೇನು, ರಾಗಿಗಂಜಿಯಂಥ ಆಹಾರವನ್ನು ಕೊಡಲು ಮುಂದಾಗುತ್ತಾರೆ. ಆದರೆ ಇದು ಅಪಾಯಕಾರಿ. 6 ತಿಂಗಳು ತುಂಬುವವರೆಗೂ ಮಗುವಿಗೆ ಎದೆ ಹಾಲು ಹೊರತು ಪಡಿಸಿ ಯಾವುದೇ ರೀತಿಯ ಆಹಾರವಾಗಲಿ, ನೀರಾಗಿ ಕೊಡಬಾರದು. (ವೈದ್ಯರು ನೀಡಿದ ಔಷಧ ಹೊರತು ಪಡಿಸಿ) ಆರು ತಿಂಗಳ ಬಳಿಕ ಮಗುವಿನ ಬೆಳವಣಿಗೆಗೆ ಎದೆಹಾಲಿನೊಂದಿಗೆ ಪೂರಕ ಪೋಷಕ ಮೆದು ಆಹಾರ ಆರಂಭಿಸಬಹುದು.
ಎರಡು ವರ್ಷ ಎದೆಹಾಲು ನೀಡಿ: ಕೆಲ ಮಹಿಳೆಯರು ಮಗುವಿಗೆ ಒಂದು ವರ್ಷದೊಳಗೇ ಎದೆ ಹಾಲು ಕುಡಿಸುವ ಅಭ್ಯಾಸ ತಪ್ಪಿಸುತ್ತಾರೆ. ಆದರೆ, ಇದು ತಪ್ಪು. ಮಗುವಿಗೆ ಗರಿಷ್ಠ 2 ವರ್ಷದ ವರೆಗೂ ಎದೆ ಹಾಲು ನೀಡಬೇಕು. ಇದರಿಂದ ಮಕ್ಕಳ ಮೆದುಳಿನ ಬೆಳವಣಿಗೆ ಉತ್ತಮವಾಗಿ ಆಗಲಿದೆ. ಜೊತೆಗೆ, ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ಆರೋಗ್ಯಕರವಾಗಿ ಬೆಳೆಯಲು ಸಹಕಾರಿಯಾಗಲಿದೆ.
ದೇಹದ ಸೌಂದರ್ಯ ಕೆಡುವುದಿಲ್ಲ: ಮಕ್ಕಳಿಗೆ ಹಾಲುಣಿಸುವುದರಿಂದ ದೇಹದ ಸೌಂದರ್ಯ ಕೆಡಬಹುದು ಎಂಬ ತಪ್ಪು ಕಲ್ಪನೆ ಕೆಲವರಲ್ಲಿ ಇದೆ. ಆದರೆ ಇದು ತಪ್ಪು, ವಯೋ ಸಹಜವಾಗಿ ದೇಹದ ಸೌಂದರ್ಯ ಕುಂದುವುದೇ ವಿನಃ ಎದೆ ಹಾಲು ಉಣಿಸುವುದಿಂದ ಮಾತ್ರ ತಮ್ಮ ಸ್ಟ್ರಕ್ವರ್ ಕೆಡುವುದಿಲ್ಲ. ಹೀಗಾಗಿ ಮಕ್ಕಳಿಗೆ ಹಾಲುಣಿಸುವ ತಾಯಂದಿರುವ ಈ ಬಗ್ಗೆ ಚಿಂತಿಸದೇ ಮಗುವಿಗೆ ಸೂಕ್ತ ರೀತಿಯಲ್ಲಿ ಎದೆ ಹಾಲು ನೀಡಿ.
ವೈದ್ಯರ ಸಲಹೆ ಪಡೆಯಿರಿ: ಈಗಷ್ಟೇ ತಾಯಿಯಾಗಿರುವ ಮಹಿಳೆಯರಿಗೆ ಎದೆ ಹಾಲು ಕೊಡುವ ಬಗ್ಗೆ ಮಾಹಿತಿಯ ಕೊರತೆ ಹಾಗೂ ಸಾಕಷ್ಟು ಅನುಮಾನಗಳು ಇರುತ್ತದೆ. ಇಂಥ ಸಂದರ್ಭದಲ್ಲಿ ಎಲ್ಲರ ಮಾತೂ ಕೇಳದೇ ನಿಮ್ಮ ಅನುಮಾನವನ್ನು ಬಗೆ ಹರಿಸಿಕೊಳ್ಳಲು ವೈದ್ಯರನ್ನೇ ಭೇಟಿ ಮಾಡಿ. ಅವರು ನೀಡುವ ಸಲಹೆಯಂತೆ ನಡೆದುಕೊಳ್ಳುವುದು ಸೂಕ್ತ.
-ಡಾ. ಜಾಯ್ಸ್ ಜಯಶೀಲನ್, ಸ್ತನ್ಯಪಾನ ಸಲಹೆಗಾರರು, ಫೋರ್ಟಿಸ್ ಆಸ್ಪತ್ರೆ.