Select Your Language

Notifications

webdunia
webdunia
webdunia
webdunia

ಮಗಳ ತಲೆಯ ಮಾಂಸವನ್ನು ಕಚ್ಚಿ ತಿಂದ ರಾಕ್ಷಸಿ ತಾಯಿ

ಮಗಳ ತಲೆಯ ಮಾಂಸವನ್ನು ಕಚ್ಚಿ ತಿಂದ ರಾಕ್ಷಸಿ ತಾಯಿ
ಮಾಲ್ಡಾ , ಶನಿವಾರ, 27 ಜೂನ್ 2015 (11:16 IST)
ಜಗತ್ತಿನಲ್ಲಿ ಅತಿ ಶ್ರೇಷ್ಠ ಸಂಬಂಧ ತಾಯಿ ಮತ್ತು ಮಗುವಿನದು ಎನ್ನುತ್ತಾರೆ. ಮಕ್ಕಳಿಗಾಗಿ ಎಲ್ಲವನ್ನು ತ್ಯಾಗ ಮಾಡುವವಳು, ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವವಳು ತಾಯಿ.  ತನ್ನ ಹೊಟ್ಟೆಯನ್ನು ಕಟ್ಟಿಕೊಂಡು ಮಕ್ಕಳ ಹೊಟ್ಟೆ ತುಂಬಿಸುವ ದೇವತೆ ಆಕೆ. ಆದರೆ ಪಶ್ಚಿಮ ಬಂಗಾಳದ ಮಾಲ್ಡಾ ತಾಲೂಕಿನ ಗೋಪಲ್‍ಪುರ ಗ್ರಾಮದಲ್ಲಿನ ತಾಯಿಯೊಬ್ಬಳು ನರಭಕ್ಷಕತನವನ್ನು ಪ್ರದರ್ಶಿಸಿದ್ದಾಳೆ. ಆಕೆ ತಿನ್ನಲು ಹೊರಟಿದ್ದು ಯಾರನ್ನು ಅಂತೀರಾ ? ತಾನೇ ಹೆತ್ತ ನಾಲ್ಕು ವರ್ಷದ ಪುಟ್ಟ ಮಗಳ ತಲೆಯನ್ನು.

42 ವರ್ಷದ ಪ್ರಮಿಳಾ ಮೊಂಡಾಲ್  ತನ್ನ ಮಗುವಿನ ತಲೆಯ ಭಾಗವನ್ನೇ ತಿಂದಿದ್ದಾಳೆ ಎಂದು ಪ್ರತ್ಯಕ್ಷದರ್ಶಿ ಹಾಗೂ ಆರೋಪಿಯ ಭಾವ ದಬ್ಲು ಮೊಂಡಾಲ್ ಹೇಳಿದ್ದಾರೆ.
 
ಪ್ರಮಿಳಾ ಮನೆಯ ಪಕ್ಕದಲ್ಲಿಯೇ ವಾಸಿಸುವ ದಬ್ಲು ಮೊಂಡಾಲ್‌ಗೆ ಪ್ರಮೀಳಾ ಮಗು ಭಾರತಿ ಅತಿಯಾಗಿ ಕಿರುಚಿಕೊಳ್ಳುತ್ತಿರುವುದು ಕೇಳಿದೆ. ಆತ ಓಡಿ ಹೋಗಿ ಏನಾಯಿತು ಎಂದು ನೋಡಿದ ತಕ್ಷಣ ಆಘಾತಕ್ಕೀಡಾಗಿದ್ದಾನೆ.  ಆತ ಕಿರುಚಿಕೊಂಡಿದ್ದನ್ನು ಕೇಳಿ ಪತ್ನಿ ಮತ್ತು ನೆರೆಹೊರೆಯವರು ಓಡಿ ಬಂದಾಗ ಕಣ್ಣು ಕತ್ತಲೆ ಬಂದು ಬೀಳುವ ಪರಿಸ್ಥಿಯಿ ಅವರಿಗೂ ಎದುರಾಯಿತು. ಪ್ರಮಿಳಾ ತನ್ನ ಮಗುವನ್ನು ತೊಡೆಯಮೇಲೆ ಮಲಗಿಸಿಕೊಂಡು ಮಗುವಿನ ತಲೆಯ ಭಾಗದ ಮಾಂಸವನ್ನು ತಿನ್ನುತ್ತಿದ್ದಳು. ಇನ್ನೊಂದೆಡೆ ಆಕೆಯ 2 ವರ್ಷ ಮಗ ಸ್ವರ್ಣ ಇನ್ನೊಂದು ಕೋಣೆಯಲ್ಲಿ  ಮಲಗಿದ್ದ. ತಕ್ಷಣ ರಕ್ತಸ್ರಾವವಾಗುತ್ತಿದ್ದ ಮಗುವನ್ನು ಎತ್ತಿಕೊಂಡ ಮೊಂಡಾಲ್ ದಂಪತಿ ಮಾಲ್ಡಾ ಮೆಡಿಕಲ್ ಆಸ್ಪತ್ರೆಗೆ ಧಾವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
 
ವಿಷಯ ಗ್ರಾಮದಲ್ಲೆಲ್ಲ ಹರಡುತ್ತಿದ್ದಂತೆ ಪ್ರಮಿಳಾ ಮನೆಯಲ್ಲಿ ಜಮಾಯಿಸಿದ ಸ್ಥಳೀಯರು ಆಕೆಯನ್ನು ಕಟ್ಟಿ ಹಾಕಿ ಥಳಿಸಿದ್ದಾರೆ. ಆರೋಪಿ ತಾಯಿ ಪ್ರಮಿಳಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳಾದರೂ ತಾನೇಕೆ ಪೈಶಾಚಿಕವಾಗಿ ವರ್ತಿಸಿದೆ ಎಂಬುದರ ಕುರಿತು ಬಾಯ್ಬಿಟ್ಟಿಲ್ಲ. ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಫೋಲಿಸರು ಆಕೆಯನ್ನು ರಕ್ಷಿಸಿದ್ದಾರೆ. 
 
ಮಾದಕ ವ್ಯಸನಿಯಾಗಿರುವ ಆಕೆ ಬುಧವಾರ ಸಂಜೆಯಿಂದಲೂ ಬಿಡದೆ ಮದ್ಯಪಾನ ಮಾಡಿದ್ದಾಳೆ ಎಂದು ಹಳ್ಳಿಯ ಜನರು ದೂರುತ್ತಿದ್ದಾರೆ. 
 
"ಪ್ರಮೀಳಾ ಪತಿ ಹಬು ಮೊಂಡಾಲ್ ದೆಹಲಿಯಲ್ಲಿ ಕಾರ್ಮಿಕನಾಗಿದ್ದು ಒಂದು ವರ್ಷದಿಂದ ಆತ ಮನೆಗೆ ವಾಪಾಸ್ಸಾಗಿಲ್ಲ. ಪ್ರಮಿಳಾಗೆ ಒಟ್ಟು 5 ಜನ ಮಕ್ಕಳಿದ್ದಾರೆ. 2 ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು,  8 ವರ್ಷದ ಪ್ರಭಾತಿ, 4 ವರ್ಷದ ಭಾರತಿ ಹಾಗೂ 2 ವರ್ಷದ ಮಗ ಸ್ವರ್ಣ ಜೊತೆ ಈಕೆ ವಾಸವಾಗಿದ್ದಾಳೆ. ಕಳೆದ 5 ತಿಂಗಳ ಹಿಂದೆ ಆಕೆ  ಪ್ರಭಾತಿಗೂ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ್ದಳು. ಇದರಿಂದ ಬೆದರಿರುವ ಬಾಲಕಿ ಹೆಚ್ಚಿನ ಸಮಯವನ್ನು ತನ್ನ ಅಂಕಲ್ ಮನೆಯಲ್ಲೇ ಕಳೆಯುತ್ತಾಳೆ", ಎಂದು ಜಬಲ್ಪುರ್-2 ಗ್ರಾಮ ಪಂಚಾಯತ್ ಸದಸ್ಯರಾದ ಸೊನೆಕಾ ಮಂಡಲ್ ತಿಳಿಸಿದ್ದಾರೆ. 
 
ಭಾರತಿಯನ್ನು ಐಸಿಯುಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
 
ಪ್ರಮೀಳಾ ಮಾನಸಿಕ ಕಾಯಿಲೆಯಿಂದ ಬಳಲುತ್ತಿರಬಹುದು. ಆಕೆಗೆ ತಕ್ಷಣಕ್ಕೆ ಚಿಕಿತ್ಸೆ ನೀಡಬೇಕೆಂದು ರಾಜ್ಯ ಆರೋಗ್ಯ ಇಲಾಖೆಯ ಹಿರಿಯ ವೈದ್ಯರು  ಅಭಿಪ್ರಾಯ ಪಟ್ಟಿದ್ದಾರೆ.
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

Share this Story:

Follow Webdunia kannada