Select Your Language

Notifications

webdunia
webdunia
webdunia
webdunia

ಮಿಡಿಯುತ್ತಿರುವ ಹೃದಯ ಹೊರಗಿದ್ದ ಮಗು ಜನನ

ಮಿಡಿಯುತ್ತಿರುವ ಹೃದಯ ಹೊರಗಿದ್ದ ಮಗು ಜನನ
ದಿಂಡೋರಿ , ಗುರುವಾರ, 19 ಮಾರ್ಚ್ 2015 (11:30 IST)
ಉತ್ತರಪ್ರದೇಶದ ದಿಂಡೋರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ಮಗುವೊಂದು ಜನಿಸಿದ್ದು ಎಲ್ಲರನ್ನು ಅಚ್ಚರಿಗೊಳಿಸಿದೆ. ಹಸುಳೆಯ ಹೃದಯ ದೇಹದ ಹೊರಗಿದ್ದು ಅದು ಮಿಡಿಯುತ್ತಿದೆ. ಈ ವಿಸ್ಮಯವನ್ನು ವೀಕ್ಷಿಸಲು ಜನರು ತಂಡೋಪತಂಡವಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
 
ಲಾತಗಾಂವ್ ಗ್ರಾಮದ 22 ವರ್ಷದ ಸುಷ್ಮಾ ಎಂಬ ಮಹಿಳೆಗೆ ಈ ಮಗು ಜನಿಸಿದೆ. ಇದು ಬಹಳ ಸೂಕ್ಷ್ಮ ಪ್ರಕರಣವಾಗಿದ್ದು ಪ್ರಾಥಮಿಕ ಚಿಕಿತ್ಸೆ ನಡೆಸಿರುವ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿಸಲು ಜಬಬಲ್ಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ.
 
ಮಕ್ಕಳ ರೋಗ ತಜ್ಞೆ ಡಾಕ್ಟರ್ ಜಿ. ಕೆ. ಸಮದ್ ಅವರ ಪ್ರಕಾರ ಈ ಸಮಸ್ಯೆ ಇದ್ದಲ್ಲಿ ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿ ಹೃದಯವನ್ನು ದೇಹದ ಒಳಗೆ ಸೇರಿಸಬೇಕಾಗುತ್ತದೆ. ಆದರೆ ಜಿಲ್ಲಾ ಆಸ್ಪತ್ರೆಯಲ್ಲಿ ಈ ವ್ಯವಸ್ಥೆ ಇಲ್ಲದ ಕಾರಣ ಮಗುವನ್ನು ಜಮಲ್ಪುರ್ ಮೆಡಿಕಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. 

Share this Story:

Follow Webdunia kannada