Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲು

ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲು
Bangalore , ಶುಕ್ರವಾರ, 10 ಮಾರ್ಚ್ 2017 (10:49 IST)
ಬೆಂಗಳೂರು: ನಗರದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಒಂದು ವರ್ಷದ ಹಿಂದೆ ನಡೆದ ಪ್ರಕರಣದ ಬಗ್ಗೆ ಯುವತಿಯೊಬ್ಬಳು ರಾಮಮೂರ್ತಿ ನಗರ ಪೊಲೀಸರಿಗೆ ದೂರು ನೀಡಿದ್ದಾಳೆ.

 
ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ತನ್ನ ಬಾರ್ ಗೆ ಬರುತ್ತಿದ್ದ ಗ್ರಾಹಕನ ಮೇಲೆ ಅತ್ಯಾಚಾರವೆಸಗಿದ ಆರೋಪ ಮಾಡಿದ್ದಾಳೆ. ಚಕ್ರಧಾರಿ ಎಂಬ ಆರೋಪಿ ಯುವತಿ ಕೆಲಸ ಮಾಡುತ್ತಿದ್ದ ಬಾರ್ ಗೆ ಬರುತ್ತಿದ್ದ.

ಈ ಸಂದರ್ಭದಲ್ಲಿ ತಂಪು ಪಾನೀಯಕ್ಕೆ ಮತ್ತು ಬೆರೆಸುವ ಔಷಧ ಬೆರೆಸಿ ಅತ್ಯಾಚಾರವೆಸಗಿದ್ದ ಎಂದು ಆರೋಪಿಸಲಾಗಿದೆ. ಅಂದ ಹಾಗೆ ಇದು ನಡೆದಿದ್ದು, ಒಂದು ವರ್ಷದ ಹಿಂದೆ. ಅಂದರೆ 2016 ರ ಫೆಬ್ರವರಿಯಲ್ಲಿ.

ಇಷ್ಟು ದಿನ ಆರೋಪಿ ತನಗೆ ಅತ್ಯಾಚಾರದ ವಿಡಿಯೋ, ಫೋಟೋ ತೋರಿಸಿ ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದ. ತಪ್ಪಿದರೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸುತ್ತಿದ್ದ ಎಂದು ಯುವತಿ ದೂರಿದ್ದಾಳೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾವಾರಿಧಿ ಹಾಸ್ಟೆಲ್ ಮಕ್ಕಳ ಸಾವು ಪ್ರಕರಣಕ್ಕೆ ಟ್ವಿಸ್ಟ್