Select Your Language

Notifications

webdunia
webdunia
webdunia
webdunia

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಅಮೃತಸರದಲ್ಲಿ ಜನಿಸಿದೆ ಪ್ಲಾಸ್ಟಿಕ್ ಶಿಶು

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಅಮೃತಸರದಲ್ಲಿ ಜನಿಸಿದೆ ಪ್ಲಾಸ್ಟಿಕ್ ಶಿಶು
ಅಮೃತಸರ್ , ಸೋಮವಾರ, 11 ಮೇ 2015 (16:25 IST)
ರಬ್ಬರ್ ಗೊಂಬೆಯಂತೆ ಕಾಣುವ, ಸರಿಸೃಪಗಳಂತ ಚರ್ಮವಿರುವ ಪ್ಲಾಸ್ಟಿಕ್ ಬೇಬಿ ಕುರಿತು ನೀವೆಂದಾದರೂ ಕೇಳಿದ್ದೀರಾ?

 
ಅಮೃತ‌ಸರ್‌ನಲ್ಲಿ ಇಂತಹ ಮಗುವೊಂದು ಹುಟ್ಟಿದ್ದು ಜನರಲ್ಲಿ ಕುತೂಹಲವನ್ನು ಕೆರಳಿಸಿದೆ. ಈ ರೀತಿಯ ಮಗು ಜನಿಸುವುದು ಅಪರೂಪವಾಗಿದ್ದು 6 ಲಕ್ಷಕ್ಕೊಬ್ಬ ಮಕ್ಕಳು ಈ ಸಮಸ್ಯೆಯೊಂದಿಗೆ ಹುಟ್ಟುತ್ತಾರೆ ಎಂದು ವೈದ್ಯರು ಹೇಳುತ್ತಾರೆ. ಪ್ಲಾಸ್ಟಿಕ್ ನವಜಾತ ಶಿಶುಗಳನ್ನು ವೈಜ್ಞಾನಿಕವಾಗಿ 'ಕೊಲಾಡಿಯನ್ ಬೇಬಿಸ್' ಎಂದು ಕರೆಯಲಾಗುತ್ತದೆ. ಗುರುನಾನಕ್ ದೇವ್  ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ವೈದ್ಯರು ಶುಕ್ರವಾರ ಈ ಮಗುವನ್ನು ಪರೀಕ್ಷಿಸಿದ್ದಾರೆ. 
 
"ಈ ಮಗುವನ್ನು ಯಾರಾದರೂ ಸ್ಪರ್ಶಿಸಿದ ಕೂಡಲೇ ಅದು ಅಳಲು ಆರಂಭಿಸುತ್ತದೆ. ರಬ್ಬರ್‍ ಗೊಂಬೆಯಂತೆ ಕಾಣುವ ಮಗುವಿನ ಮುಖ ಮೀನಿನಂತಿದೆ.  ಕಣ್ಣು ಮತ್ತು ತುಟಿಗಳು ಗಾಢ ಕೆಂಪು ಬಣ್ಣದಲ್ಲಿವೆ. ಮಗು ಎದೆಹಾಲನ್ನು ಕುಡಿಯುವ ಸಾಮರ್ಥ್ಯವನ್ನು ಹೊಂದಿಲ್ಲ" , ಎಂದು ವೈದ್ಯರು ತಿಳಿಸಿದ್ದಾರೆ. 
 
ಇದು ಆನುವಂಶಿಕ ಸಮಸ್ಯೆ. ಕೆಲವು ವಂಶವಾಹಿಗಳ ರೂಪಾಂತರದ ಕಾರಣದಿಂದ ಉಂಟಾಗುತ್ತದೆ ಮತ್ತು ಸಾಮಾನ್ಯವಾಗಿ ತೀವ್ರ ಆಟೋಸೋಮಲ್ ಮತ್ತು ಜನ್ಮಜಾತ ಮತ್ಸ್ಯವ್ಯಾಧಿಯಾಗಿದೆ ಎಂದು ವೈದ್ಯರು ಸ್ಪಷ್ಟೀಕರಿಸಿದ್ದಾರೆ. 

Share this Story:

Follow Webdunia kannada