Select Your Language

Notifications

webdunia
webdunia
webdunia
webdunia

ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಗಾರ್ಡ್: ಆರೋಪಿಯ ಬಂಧನ

ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಗಾರ್ಡ್: ಆರೋಪಿಯ ಬಂಧನ
ಹುಬ್ಬಳ್ಳಿ , ಬುಧವಾರ, 14 ಅಕ್ಟೋಬರ್ 2015 (15:36 IST)
ರೋಗಿಯ ಯೋಗಕ್ಷೇಮ ನೋಡಿಕೊಳ್ಳಲೆಂದು ಆಗಮಿಸಿದ್ದ ಮಹಿಳೆಯೋರ್ವಳ ಮೇಲೆ ಆಸ್ಪತ್ರೆಯ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ಇಂದು ಮುಂಜಾನೆ ಅತ್ಯಾಚಾರಕ್ಕೆ ನಡೆಸಲು ಯತ್ನಿಸಿರುವ ಘಟನೆ ಇಂದು ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. 
 
ಮಹಿಳೆ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ವ್ಯಕ್ತಿಯನ್ನು ಚಂದ್ರಶೇಖರ್ ಹಡಪದ(28) ಎಂದು ಹೇಳಲಾಗಿದ್ದು, ಈತ ಇದೇ ಕಿಮ್ಸ್ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. 
ಘಟನೆ ಹಿನ್ನೆಲೆ: ಮಹಿಳೆಯೋರ್ವವರು ತಮ್ಮ ಕುಟುಂಬ ವ್ಯಕ್ತಿಯೋರ್ವರನ್ನು ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಇದನ್ನು ಕಂಡ ಚಂದ್ರಶೇಖರ ಮಹಿಳೆಯ ಹಿಂದೆ ಬಿದ್ದಿದ್ದಾನೆ. ಅಷ್ಟೇ ಅಲ್ಲದೆ ಇಂದು ಮುಂಜಾನೆ ಆಸ್ಪತ್ರೆಯ ಒಳ ರೋಗಿಗಳ ವಿಭಾಗಕ್ಕೆ ನುಗ್ಗಿ  ಆಕೆಯ ಮೇಲೆ ಅತ್ಯಾಚಾರ ಎಸಗಲೂ ಮುಂದಾಗಿದ್ದಾನೆ. ಇದನ್ನು ಕಂಡ ಸಾರ್ವಜನಿಕರು ಆರೋಪಿಯನ್ನು ಹಿಡಿದು ಯಗ್ಗಾಮುಗ್ಗಾ ಥಳಿಸಿ ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ. 
 
ಆರೋಪಿಯನ್ನು ವಶಕ್ಕೆ ಪಡೆದಿರುವ ನಗರದ ವಿದ್ಯಾನಗರ ಪೊಲೀಸ್ ಠಾಣೆಯ ಅಧಿಕಾರಿಗಳು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಹಿಳೆಯ ಹೇಳಿಕೆ ಪ್ರಕಾರ, ಕಳೆದ ಮೂರು ದಿನಗಳಿಂದಲೂ ಕೂಡ ಮಹಿಳೆಯ ಹಿಂದೆ ಬಿದ್ದು ಕಾಡುತ್ತಿದ್ದ ಎಂದು ತಿಳಿದು ಬಂದಿದೆ.

Share this Story:

Follow Webdunia kannada