Select Your Language

Notifications

webdunia
webdunia
webdunia
webdunia

‘ರವಿಚಂದ್ರನ್ ಅಶ್ವಿನ್ ಬೌಲಿಂಗ್ ನ ಡಾನ್ ಬ್ರಾಡ್ಮನ್ ಇದ್ದಂತೆ!’

‘ರವಿಚಂದ್ರನ್ ಅಶ್ವಿನ್ ಬೌಲಿಂಗ್ ನ ಡಾನ್ ಬ್ರಾಡ್ಮನ್ ಇದ್ದಂತೆ!’
NewDelhi , ಬುಧವಾರ, 15 ಫೆಬ್ರವರಿ 2017 (09:46 IST)
ನವದೆಹಲಿ: ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಸಿಸಿ ಶ್ರೇಯಾಂಕದಲ್ಲಿ ನಂ.1 ಆಟಗಾರ. ಸದ್ಯಕ್ಕೆ ಆಡುತ್ತಿರುವ ಬೆಸ್ಟ್ ಸ್ಪಿನ್ನರ್ ಅಶ್ವಿನ್. ಅಷ್ಟು ಮಾತ್ರವಲ್ಲ,  ಅವರು ಬೌಲಿಂಗ್ ನ ಡಾನ್ ಬ್ರಾಡ್ಮನ್ ಅಂತೆ.


ಹಾಗಂತ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಹೊಗಳಿದ್ದಾರೆ. ಡಾನ್ ಬ್ರಾಡ್ಮನ್ ಕ್ರಿಕೆಟ್ ಜಗತ್ತು ಕಂಡ ಸರ್ವ ಶ್ರೇಷ್ಠ ಬ್ಯಾಟ್ಸ್ ಮನ್. ಅಂತಹ ಮಹಾನ್ ಆಟಗಾರನಿಗೆ ಅಶ್ವಿನ್ ರನ್ನು ಹೋಲಿಸಿದ್ದಾರೆ ವಾ.

ಅಲ್ಲದೆ ಭಾರತ ಸರಣಿಗೆ ಸಜ್ಜಾಗುತ್ತಿರುವ ಆಸ್ಟ್ರೇಲಿಯನ್ನರು ಅಶ್ವಿನ್ ರನ್ನು ಎದುರಿಸಲು ಕಲಿತರೆ ಮಾತ್ರ ಯಶಸ್ಸು ಸಾಧ್ಯ. ನಮ್ಮ ಹುಡುಗರು ಒತ್ತಡದ ಸನ್ನಿವೇಶದಲ್ಲೂ ಕೂಲ್ ಆಗಿರಲು ಕಲಿಯಬೇಕು ಎಂದು ತಮ್ಮ ದೇಶದ ಆಟಗಾರರಿಗೆ ವಾ ಕಿವಿ ಮಾತು ಹೇಳಿದ್ದಾರೆ. ಆಸ್ಟ್ರೇಲಿಯಾ ಈಗ ಪ್ರಚಂಡ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಬಗ್ಗೆ ತಲೆಕೆಡಿಸಿಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ರತ್ನ ಬಿರುದಿಗೆ ತಕ್ಕಂತೆ ನಡೆದುಕೊಂಡ ಸಚಿನ್ ತೆಂಡುಲ್ಕರ್!