Select Your Language

Notifications

webdunia
webdunia
webdunia
webdunia

ಆಶಿಷ್ ನೆಹ್ರಾ ಎಂದರೆ ಬೌಲಿಂಗ್ ವಿಭಾಗದ ವಿರಾಟ್ ಕೊಹ್ಲಿಯಂತೆ!

ಆಶಿಷ್ ನೆಹ್ರಾ ಎಂದರೆ ಬೌಲಿಂಗ್ ವಿಭಾಗದ ವಿರಾಟ್ ಕೊಹ್ಲಿಯಂತೆ!
NewDelhi , ಶನಿವಾರ, 4 ಫೆಬ್ರವರಿ 2017 (09:00 IST)
ನವದೆಹಲಿ: ಆಶಿಷ್ ನೆಹ್ರಾ ಟೀಂ ಇಂಡಿಯಾದ ಹಿರಿಯ ವೇಗದ ಬೌಲರ್. ಅವರನ್ನು ಈಗಲೂ ತಂಡಕ್ಕೆ ಸೇರಿಸಿಕೊಂಡಿರುವ ಬಗ್ಗೆ ಹಲವು ಟೀಕೆಗಳಿತ್ತಾದರೂ, ಇಂಗ್ಲೆಂಡ್ ಸರಣಿಯಲ್ಲಿ ಟೀಕಾಕಾರರ ಬಾಯಿ ಮುಚ್ಚಿಸಿದರು. ಇದೀಗ ಹರ್ಭಜನ್ ಸಿಂಗ್ ನೆಹ್ರಾ ಬಗ್ಗೆ ವಿಶಿಷ್ಟವಾಗಿ ಹೊಗಳಿದ್ದಾರೆ.

 
ಒಂದು ಕಾಲದಲ್ಲಿ ತಮ್ಮ ನೆಚ್ಚಿನ ಸಹವರ್ತಿಯಾಗಿದ್ದ ನೆಹ್ರಾ ಕೌಶಲ್ಯದ ವಿಚಾರದಲ್ಲಿ ಟೀಂ ಇಂಡಿಯಾದ ಬೌಲಿಂಗ್ ವಿಭಾಗದ ವಿರಾಟ್ ಕೊಹ್ಲಿಯಂತೆ ಎಂದಿದ್ದಾರೆ. ‘ಕೊಹ್ಲಿ ಹೇಗೆ ಬೌಲರ್ ಯಾವ ರೀತಿ ಬಾಲ್ ಮಾಡುತ್ತಾನೆ, ತಾನು ಯಾವ ರೀತಿ ಹೊಡೆಯಬೇಕು ಎಂದು ಲೆಕ್ಕಾಚಾರ ಹಾಕುತ್ತಾರೋ, ಅದೇ ರೀತಿ ನೆಹ್ರಾ ಗೆ ಕೂಡಾ ತಾನು ಯಾವ ರೀತಿ ಬಾಲ್ ಮಾಡಿದರೆ ಬ್ಯಾಟ್ಸ್ ಮನ್ ಯಾವ ರೀತಿ ಪ್ರತಿಕ್ರಿಯಿಸಬಹುದು ಎಂದು ಚೆನ್ನಾಗಿ ಗೊತ್ತು’ ಎಂದು ಭಜಿ ಹೊಗಳಿದ್ದಾರೆ.

38 ವರ್ಷದ ನೆಹ್ರಾ ಈ ವಯಸ್ಸಿನಲ್ಲೂ 140 ಕಿ.ಮೀ. ವೇಗದಲ್ಲಿ ಚೆಂಡು ಎಸೆಯುತ್ತಾರೆಂದರೆ ಅವರ ದೇಹ ರಚನೆಯೇ ಹಾಗಿದೆ. ಅಷ್ಟೊಂದು ಬಾರಿ ಗಾಯಗೊಂಡಿದ್ದರೂ, ತಮ್ಮ ದೇಹವನ್ನು ಅಗತ್ಯಕ್ಕೆ ತಕ್ಕ ಹಾಗೆ ಚೆನ್ನಾಗಿ ನಿಭಾಯಿಸಿದ್ದಾರೆ ಎಂಬುದು ಭಜಿ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ದೆಹಲಿ ಪೊಲೀಸರು ನನ್ನನ್ನು ಭಯೋತ್ಪಾದಕರಂತೆ ಟ್ರೀಟ್ ಮಾಡಿದರು’