Select Your Language

Notifications

webdunia
webdunia
webdunia
webdunia

ಜಿಂಬಾಬ್ವೆ ಪ್ರವಾಸವು ಯುವಆಟಗಾರರಿಗೆ ಸೂಕ್ತ ಅವಕಾಶ: ಸಂಜಯ್ ಬಂಗಾರ್

ಜಿಂಬಾಬ್ವೆ ಪ್ರವಾಸವು ಯುವಆಟಗಾರರಿಗೆ ಸೂಕ್ತ ಅವಕಾಶ: ಸಂಜಯ್ ಬಂಗಾರ್
ನವದೆಹಲಿ , ಗುರುವಾರ, 9 ಜೂನ್ 2016 (11:34 IST)
ಭಾರತ ಕ್ರಿಕೆಟ್ ತಂಡವು ಚಿನಕುರುಳಿ ಜಿಂಬಾಬ್ವೆ ವಿರುದ್ಧ ಮುಂಬರುವ ಸೀಮಿತ ಓವರುಗಳ ಪಂದ್ಯಗಳನ್ನು ಆಡುತ್ತಿರುವುದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಲು ಯುವಆಟಗಾರರಿಗೆ ಉತ್ತಮ ಅವಕಾಶ ಎಂದು ಜಿಂಬಾಬ್ವೆ ಪ್ರವಾಸದಲ್ಲಿ ಭಾರತದ ಕೋಚ್ ಆಗಿರುವ ಸಂಜಯ್ ಬಂಗಾರ್ ಹೇಳಿದ್ದಾರೆ.
 
ಭಾರತ ಮತ್ತು ರೈಲ್ವೆಯ ಮಾಜಿ ಆಲ್‌‍ರೌಂಡರ್ ಬಂಗಾರ್ ಅವರನ್ನು ಜಿಂಬಾಬ್ವೆ ಪ್ರವಾಸಕ್ಕೆ ಕೋಚ್ ಆಗಿ ಹೆಸರಿಸಲಾಗಿದ್ದು, ಜೂನ್ 11ರಿಂದ ಮೂರು ಏಕದಿನ ಪಂದ್ಯಗಳನ್ನು ಮತ್ತು ಮೂರು ಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಭಾರತ ಆಡಲಿದೆ. ಆಯ್ಕೆದಾರರು ಪ್ರವಾಸಕ್ಕೆ ಅನನುಭವಿ ತಂಡವನ್ನು ಹೆಸರಿಸಿದ್ದು, ಧೋನಿ ನಾಯಕತ್ವದ ವಹಿಸಲಿದ್ದಾರೆ.
 
ನಾನು ತುಂಬಾ ಪುಳಕಿತನಾಗಿದ್ದು, ಈ ಗೌರವ ನೀಡಿದ್ದಕ್ಕಾಗಿ ಬಿಸಿಸಿಐಗೆ ಧನ್ಯವಾದಗಳು. ಯುವ ಆಟಗಾರರಿಗೆ ಇದು ಮುಖ್ಯ ಪ್ರವಾಸವಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ರಂಗದಲ್ಲಿ ಸ್ವಯಂ ಪರೀಕ್ಷಿಸಿಕೊಳ್ಳಲು ಸೂಕ್ತ ಅವಕಾಶ ಅವರಿಗೆ ಒದಗಿಸಿದೆ ಬಂಗಾರ್ ಹೇಳಿದ್ದಾರೆ.
 
ಜಿಂಬಾಬ್ವೆಯಲ್ಲಿ 2013 ಮತ್ತು 2015ರ ಹಿಂದಿನ ಎರಡು ಪ್ರವಾಸಗಳಲ್ಲಿ ಭಾರತ ಆತಿಥೇಯ ತಂಡವನ್ನು ವೈಟ್‌ವಾಶ್ ಮಾಡಿತ್ತು.  ನಾವು ಜಿಂಬಾಬ್ವೆಗೆ ಇಳಿದ ಕೂಡಲೇ ವೈಯಕ್ತಿಕ ಶಕ್ತಿಗಳ ಬಗ್ಗೆ ನಮಗೆ ಅರಿವಿರಬೇಕು. ಅವರಿಂದ ನಾವು ಏನನ್ನು ನಿರೀಕ್ಷಿಸಬಹುದು ಎಂದು ತಿಳಿದು ಅದಕ್ಕೆ ಹೊಂದಿಕೊಳ್ಳುವಂತೆ ಆಡಿಸುತ್ತೇವೆ. ನಮ್ಮ ಯುವ ಆಟಗಾರರ ಪೈಕಿ ಅನೇಕ ಮಂದಿ ಜಿಂಬಾಬ್ವೆಯಲ್ಲಿ ಆಡಿಲ್ಲ. ಇಂತಹ ಅಲ್ಪ ಅವಧಿಯಲ್ಲಿ ಆ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಸವಾಲಿನ ಕೆಲಸವಾಗಿದೆ ಎಂದು ಬಂಗಾರ್ ಹೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ತೆಂಡೂಲ್ಕರ್ ವಿಸ್ಮಯಕಾರಿ ಪ್ರತಿಭಾಶಾಲಿ: ಅಲಸ್ಟೈರ್ ಕುಕ್