ಧೋನಿ ಪುತ್ರಿ ಜೀವಾ ಕೇಳಿದ ಈ ಪ್ರಶ್ನೆಗೆ ಅಮ್ಮ ಸಾಕ್ಷಿ ತಬ್ಬಿಬ್ಬು!

Webdunia
ಶುಕ್ರವಾರ, 20 ಮಾರ್ಚ್ 2020 (09:07 IST)
ರಾಂಚಿ: ಧೋನಿ ಪುತ್ರಿ ಜೀವಾ ಆಗಾಗ ತನ್ನ ಮುದ್ದು ಮುದ್ದಾದ ವಿಡಿಯೋಗಳಿಂದ ಫೇಮಸ್ ಆಗಿಬಿಟ್ಟಿದ್ದಾಳೆ. ಆದರೆ ಜೀವಾ ಇದೀಗ ಕೇಳಿರುವ ಗಂಭೀರ ಪ್ರಶ್ನೆಗೆ ಅಮ್ಮ ಸಾಕ್ಷಿ ತಬ್ಬಿಬ್ಬಾಗಿದ್ದಾರೆ! ಅಷ್ಟಕ್ಕೂ ಜೀವಾ ಏನು ಪ್ರಶ್ನೆ ಕೇಳಿದಳು ಗೊತ್ತಾ?


ಜೀವಾ ಧೋನಿ ಕೇಳಿದ ಪ್ರಶ್ನೆಯನ್ನು ಸಾಕ್ಷಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ. ‘ಕೆಲವು ಮಾರಕ ಸೋಂಕುಗಳು ಕೇವಲ ಮನುಷ್ಯರಿಗೆ ಮಾತ್ರ ಯಾಕೆ ಬರುತ್ತವೆ? ಪ್ರಾಣಿಗಳಿಗೆ ಯಾಕೆ ಬರಲ್ಲ?’ ಹೀಗೊಂದು ಪ್ರಶ್ನೆಯನ್ನು ಜೀವಾ ಕೇಳಿದ್ದಾಳೆ.

ಇದಕ್ಕೆ ಸಾಕ್ಷಿ ‘ನಮ್ಮ ಭೂಮಿ ದೇವಿ ಮನುಷ್ಯರು ಮಾಡುವ ಕೆಲಸದಿಂದ ಬೇಸರಗೊಂಡಿದ್ದಾಳೆ. ಅದಕ್ಕೇ ಮನುಷ್ಯರಿಗೆ ಇಂತಹ ಖಾಯಿಲೆ ಬರುತ್ತಿದೆ’ ಎಂದು ಸಮಾಧಾನಿಸಿದ್ದಾರೆ. ಅಷ್ಟೇ ಅಲ್ಲದೆ, ಭೂಮಿ ದೇವಿಗೆ ಖುಷಿಯಾಗುವ ಹಾಗೆ ನಾವು ಏನು ಮಾಡಬೇಕು ಎಂದು ಜೀವಾ ಕೇಳಿದ್ದು, ಇದಕ್ಕೆ ಸಾಕ್ಷಿ ನಮ್ಮ ಸುತ್ತಮುತ್ತಲ ಪರಿಸರ ಶುಚಿಯಾಗಿಟ್ಟುಕೊಳ್ಳಬೇಕು, ನೀರು, ಆಹಾರ ಪೋಲು ಮಾಡಬಾರದು ಎಂದೆಲ್ಲಾ ತಿಳಿಸಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪ್ರಧಾನಿ ನರೇಂದ್ರ ಮೋದಿ ಮುಂದಿಟ್ಟ ಹರ್ಲೀನ್ ಡಿಯೋಲ್ ಪ್ರಶ್ನೆಗೆ ಎಲ್ಲರಿಗೂ ನಗು

ವಿಶ್ವಕಪ್‌ ಗೆದ್ದ ಚಾರಿತ್ರಿಕ ಸಾಧನೆ ಮೆರೆದ ಭಾರತದ ವನಿತೆಯರಿಗೆ ಟಾಟಾ ಸಂಸ್ಥೆಯಿಂದ ಭರ್ಜರಿ ಗಿಫ್ಟ್‌

ಆರ್‌ಸಿಬಿ ತಂಡ ಮಾರಾಟವಾಗೋದು ಪಕ್ಕಾ: ಮುಂದಿನ ವರ್ಷದಲ್ಲೇ ಫ್ರ್ಯಾಂಚೈಸಿಗೆ ಹೊಸ ಮಾಲೀಕರು

IND vs AUS: ಟೀಂ ಇಂಡಿಯಾಕ್ಕೆ ಮತ್ತೆ ಮತ್ತೆ ಟಾಸ್ ಸೋಲು, ಟಾಸ್ ಗೆಲ್ಲೋದು ಹಣೇಲೇ ಬರೆದಿಲ್ಲ

ಮೊಹಮ್ಮದ್ ಶಮಿ ಏನು ತಪ್ಪು ಮಾಡಿದ್ದಾರೆ.. ಅಜಿತ್ ಅಗರ್ಕರ್ ವಿರುದ್ಧ ಫ್ಯಾನ್ಸ್ ಗರಂ

ಮುಂದಿನ ಸುದ್ದಿ
Show comments