Webdunia - Bharat's app for daily news and videos

Install App

ಯುವರಾಜ್ ಸಿಂಗ್-ಸೈನಾ ನೆಹ್ವಾಲ್ ಟ್ವಿಟರ್ ನಲ್ಲಿ ಜುಗಲ್ ಬಂದಿ!

Webdunia
ಗುರುವಾರ, 26 ಜನವರಿ 2017 (12:04 IST)
ನವದೆಹಲಿ: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಕ್ರಿಕೆಟಿಗ ಯುವರಾಜ್ ಸಿಂಗ್ ಇದೀಗ ಒಂಥರಾ ಒಂದೇ ದೋಣಿಯ ಪಯಣಿಗರು. ಯಾಕೆಂದರೆ ಇಬ್ಬರೂ ಆಟಗಾರರಿಗೂ ಈಗ ಕಮ್ ಬ್ಯಾಕ್ ಪರ್ವ! ಹಾಗಿರುವ ಆಟಗಾರರು ಟ್ವಿಟರ್ ನಲ್ಲಿ ನಡೆಸಿದ ಸಂಭಾಷಣೆ ನಿಜಕ್ಕೂ ಮೆಚ್ಚುವಂತಹದ್ದು.

 
ಹಲವು ದಿನಗಳಿಂದ ಮಂಕಾಗಿದ್ದ ಸೈನಾ ನೆಹ್ವಾಲ್ ಕಾಲ ಮುಗಿದೇ ಹೋಯಿತು ಎಂದು ಎಲ್ಲರೂ ಅಂದುಕೊಳ್ಳತ್ತಿರುವಾಗಲೇ ಎದ್ದು ನಿಂತ ಬ್ಯಾಡ್ಮಿಂಟನ್ ತಾರೆ ಮಲೇಷ್ಯಾ ಓಪನ್ ಪ್ರಶಸ್ತಿ ಗೆದ್ದು ಬೀಗಿದ್ದರು. ಇದಕ್ಕೆ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಸೈನಾಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದರು.

“ಮಲೇಷ್ಯಾ ಓಪನ್ ಚಾಂಪಿಯನ್! ಎಂತಹಾ ನೈಜ ಚಾಂಪಿಯನ್ ಆಕೆ. ಗಾಯದಿಂದ ಚೇತರಿಸಿಕೊಂಡು ಹಲವು ದಿನಗಳ ನಂತರ ಕಮ್ ಬ್ಯಾಕ್ ಮಾಡಿದ್ದಾರೆ” ಎಂದು ಸೈನಾಗೆ ಅಭಿನಂದನೆ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸೈನಾ “ಧನ್ಯವಾದಗಳು ಯುವಿ. ನಿಮಗೂ ಇತ್ತೀಚೆಗಿನ ಏಕದಿನ ಪಂದ್ಯದಲ್ಲಿ ಸಾಟಿಯಿಲ್ಲದ ಭರ್ಜರಿ ಪ್ರದರ್ಶನ ನೀಡಿದ್ದಕ್ಕೆ ಅಭಿನಂದನೆಗಳು” ಎಂದು ಪ್ರತಿಕ್ರಿಯಿಸಿದ್ದಾರೆ.

ಸೈನಾರಂತೇ ಯುವಿ ಕೂಡಾ ಹಲವು ದಿನಗಳ ನಂತರ ಟೀಂ ಇಂಡಿಯಾಕ್ಕೆ ಮರಳಿದ್ದಲ್ಲದೆ, ಐದು ವರ್ಷದ ಬಳಿಕ ಶತಕ ಸಿಡಿಸಿ ಕಮ್ ಬ್ಯಾಕ್ ಮಾಡಿದ್ದಾರೆ. ಹೀಗಾಗಿ ಈ ಕಮ್ ಬ್ಯಾಕ್ ತಾರೆಗಳು ಪರಸ್ಪರ ಮೆಚ್ಚಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments