Publish Date: Sat, 19 Sep 2020 (10:16 IST)
Updated Date: Sat, 19 Sep 2020 (10:18 IST)
ಮುಂಬೈ: ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಬೌಲಿಂಗ್ ನಲ್ಲಿ ಒಂದೇ ಓವರ್ ನಲ್ಲಿ ಎಲ್ಲಾ ಬಾಲ್ ಗಳನ್ನು ಸಿಕ್ಸರ್ ಗೆ ಚಚ್ಚಿದ್ದು ಇಂದಿಗೂ ಕ್ರಿಕೆಟ್ ಪ್ರಿಯರಿಗೆ ನೆನಪಿರುತ್ತದೆ.
ಆ ಸ್ಮರಣೀಯ ಇನಿಂಗ್ಸ್ ಗೆ ಇಂದು 13 ವರ್ಷಗಳ ಸಂಭ್ರಮ. ಅದೇ ಸ್ಮರಣೀಯ ಇನಿಂಗ್ಸ್ ನ ಫೋಟೋ ಪ್ರಕಟಿಸಿದ ಯುವಿ ದಿನಗಳು ಎಷ್ಟು ಬೇಗ ಉರುಳುತ್ತವೆ ಎಂದು ಬರೆದುಕೊಂಡಿದ್ದಾರೆ. ಯುವಿಯ ಸೋಷಿಯಲ್ ಮೀಡಿಯಾ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಸ್ಟುವರ್ಟ್ ಬ್ರಾಡ್ ‘ದಿನಗಳು ಬೇಗ ಉರುಳುತ್ತದೋ ಇಲ್ಲವೋ ಬೇಡ, ಆವತ್ತಿನ ರಾತ್ರಿ ಬಾಲ್ ಮಾತ್ರ ರಾಕೆಟ್ ಸ್ಪೀಡ್ ನಲ್ಲಿ ಸಾಗಿತ್ತು’ ಎಂದಿದ್ದಾರೆ.