ನವದೆಹಲಿ: ಮದುವೆಯಾದ ನಂತರ ಹನಿಮೂನ್ ಗೆಂದು ಯುವಜೋಡಿಗಳು ಸುತ್ತಾಡೋದು ಕಾಮನ್. ಹಾಗೆಯೇ ಇತ್ತೀಚೆಗಷ್ಟೇ ಮಾಡೆಲ್ ಕೀಚ್ ಹೇಝಲ್ ರನ್ನು ಮದುವೆಯಾದ ಕ್ರಿಕೆಟಿಗ ಯುವರಾಜ್ ಸಿಂಗ್ ಪತ್ನಿ ಜತೆ ಜಾಲಿ ಮೂಡ್ ನಲ್ಲಿರುವ ಫೋಟೋ ಪ್ರಕಟಿಸಿದ್ದಾರೆ.
ಯುವರಾಜ್ ಸಿಂಗ್ ಮೊನ್ನೆಯಷ್ಟೇ ತಮ್ಮ 35 ನೇ ವರ್ಷದ ಜನ್ಮ ದಿನ ಆಚರಿಸಿಕೊಂಡಿದ್ದರು. ಮದುವೆಯಾದ ಕೆಲವೇ ದಿನಕ್ಕೆ ಬರ್ತ್ ಡೇ ಅಂದ್ರೆ ಸುಮ್ನೇನಾ. ಪತ್ನಿ ಜತೆ ಬೀಚ್ ಸೈಡ್ ನಲ್ಲಿ, ನೀರ ಮೇಲೆ ಬೋಟ್ ನಲ್ಲಿ ಡ್ಯುಯೆಟ್ ಹಾಡುವ ಫೋಟೋಗಳನ್ನು ಯುವಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ನನ್ನ ಸಂಗಾತಿಯೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದೇನೆ ಎಂದು ಯುವಿ ಅಡಿಬರಹ ಕೂಡಾ ಕೊಟ್ಟಿದ್ದಾರೆ. ಇಬ್ಬರ ಕ್ಯೂಟ್ ಫೋಟೋ ನೀವೇ ನೋಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ