Select Your Language

Notifications

webdunia
webdunia
webdunia
webdunia

ಯೂನಿಸ್ ಖಾನ್ ಗೆ ಭಾರತ ಪಾಕ್ ಕ್ರಿಕೆಟ್ ಆಡುವ ಆಸೆ

ಯೂನಿಸ್ ಖಾನ್ ಗೆ ಭಾರತ ಪಾಕ್ ಕ್ರಿಕೆಟ್ ಆಡುವ ಆಸೆ
AbuDabi , ಶುಕ್ರವಾರ, 21 ಅಕ್ಟೋಬರ್ 2016 (08:53 IST)
ಅಬುದಾಬಿ: ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಯೂನಿಸ್ ಖಾನ್ ಗೆ ಭಾರತ ಪಾಕಿಸ್ತಾನ ನಡುವೆ ಟೆಸ್ಟ್ ಸರಣಿ ನಡೆಯಬೇಕೆಂಬ ಆಶಯವಂತೆ

ಉರಿ ದಾಳಿ ನಂತರ ಉಭಯ ದೇಶಗಳ ನಡುವಿನ ಸಂಬಂಧ ಸಂಪೂರ್ಣ ಹಳಸಿದ್ದು, ಕ್ರಿಕೆಟ್ ಸೇರಿದಂತೆ, ಇತರ ಕ್ರೀಡೆಗಳು ನಡೆಯುವ ಪರಿಸ್ಥಿತಿಯಲ್ಲಿಲ್ಲ. ಹೀಗಿರುವಾಗ ಯೂನಿಸ್ ಖಾನ್  ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ.

“ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಲೋಕದ ಎರಡು ದೈತ್ಯ ಶಕ್ತಿಗಳು. ಭಾರತ ಮತ್ತು ವಿಶ್ವದ ಇತರ ದೈತ್ಯ ತಂಡಗಳೊಂದಿಗೆ ಟೆಸ್ಟ್ ಕ್ರಿಕೆಟ್ ಆಡುವುದು ನನ್ನ ಕನಸು” ಎಂದು ಅವರು ಹೇಳಿಕೊಂಡಿದ್ದಾರೆ.

ಉಭಯ ದೇಶಗಳ ನಡುವೆ ಸದ್ಯಕ್ಕೆ ಯಾವುದೇ ಕ್ರಿಕೆಟ್ ಸರಣಿ ಆಡುವ ಪ್ರಸ್ತಾಪವನ್ನು ಇತ್ತೀಚೆಗಷ್ಟೇ ಬಿಸಿಸಿಐ ತಿರಸ್ಕರಿಸಿತ್ತು. ಅಲ್ಲದೆ ಚಾಂಪಿಯನ್ಸ್ ಟ್ರೋಫಿಯಲ್ಲೂ ಈ ಎರಡೂ ದೇಶಗಳನ್ನು ಒಂದೇ ಗುಂಪಿನಲ್ಲಿ ಹಾಕಬೇಡಿ ಎಂದು ಐಸಿಸಿಗೆ ಮನವಿ ಮಾಡಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರೋಚಕ ಪಂದ್ಯದಲ್ಲಿ ಸೋತ ಟೀಂ ಇಂಡಿಯಾ