ಪುಣೆ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಪ್ರಥಮ ಟೆಸ್ಟ್ ನ ಮೊದಲ ದಿನ ಆಸೀಸ್ ಆರಂಭಿಕ ಮ್ಯಾಟ್ ರೆನ್ ಶೋ ಪಂದ್ಯದ ನಡುವೆ ಔಟಾಗದಿದ್ದರೂ ಪೆವಲಿಯನ್ ಗೆ ಮರಳಿದ್ದರು. ಗಾಯವೇನೂ ಆಗಿರಲಿಲ್ಲ. ಹಾಗಿದ್ದರೂ ಅವರು ಆಟ ಅರ್ಧಕ್ಕೆ ನಿಲ್ಲಿಸಿ ಹೋಗಿದ್ದೇಕೆ ಎನ್ನುವುದಕ್ಕೆ ಕಾರಣ ಈಗ ಗೊತ್ತಾಗಿದೆ.
ಇದಕ್ಕೆಲ್ಲಾ ಕಾರಣ ಟಾಯ್ಲೆಟ್ ಗೆ ಹೋಗಲು ಅವಸರವಾಗಿದ್ದು ಎಂದು ಸ್ವತಃ ರೆನ್ ಶೋ ಬಹಿರಂಗಪಡಿಸಿದ್ದಾರೆ. “ನೈಸರ್ಗಿಕ ಕರೆ ಮುಂದೆ ನಿಮ್ಮ ಯಾವ ಆತ್ಮ ಶಕ್ತಿಯೂ ಕೆಲಸಕ್ಕೆ ಬರಲ್ಲ. ಡೇವಿಡ್ ವಾರ್ನರ್ ಔಟಾಗುವ 5 ನಿಮಿಷ ಮೊದಲೇ ನನಗೆ ಬಹಿರ್ದೆಸೆಗೆ ಹೋಗಲು ಅವಸರವಾಗಿತ್ತು. ಆದರೆ ತಡೆದುಕೊಂಡು ಕೂತಿದ್ದೆ.
ಆದರೆ ಯಾಕೋ ಇದರಿಂದ ನನಗೆ ಬ್ಯಾಟಿಂಗ್ ಮಾಡಲೂ ಕಷ್ಟವಾಗುತ್ತಿದೆ ಅನಿಸಿತು. ಅಂಪಾಯರ್ ಬಳಿ ಹೋಗಿ ಊಟದ ವಿರಾಮಕ್ಕೆ ಎಷ್ಟು ಸಮಯವಿದೆ ಎಂದು ಕೇಳಿದೆ. ಅರ್ಧಗಂಟೆ ಇದೆ ಎಂದರು. ಅಷ್ಟು ಸಮಯ ನನ್ನಿಂದ ತಡೆದುಕೊಂಡು ಬ್ಯಾಟಿಂಗ್ ಮಾಡಲು ಕಷ್ಟವಾಗಬಹುದು ಎನಿಸಿತು. ಅದಕ್ಕೆ ನಾಯಕ ಮತ್ತು ಅಂಪಾಯರ್ ಬಳಿ ಹೋಗಿ ಕಾರಣ ವಿವರಿಸಿ ಪೆವಿಲಿಯನ್ ಗೆ ಮರಳಿದೆ” ಎಂದು ರೆನ್ ಶೋ ವಿವರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ