Select Your Language

Notifications

webdunia
webdunia
webdunia
webdunia

ರಾಹುಲ್ ದ್ರಾವಿಡ್ ಎದುರಿಸಿದ ಅತ್ಯುತ್ತಮ ವೇಗದ ಬೌಲರ್ ಇವರಂತೆ

ರಾಹುಲ್ ದ್ರಾವಿಡ್ ಎದುರಿಸಿದ ಅತ್ಯುತ್ತಮ ವೇಗದ ಬೌಲರ್ ಇವರಂತೆ
NewDelhi , ಶನಿವಾರ, 3 ಡಿಸೆಂಬರ್ 2016 (08:04 IST)
ನವದೆಹಲಿ: ನಾನು ವೃತ್ತಿ ಜೀವನದಲ್ಲಿ ಎದುರಿಸಿದ ಅತ್ಯುತ್ತಮ ವೇಗದ ಬೌಲರ್ ಎಂದರೆ ಗ್ಲೆನ್ ಮೆಕ್ ಗ್ರಾತ್ ಎಂದು ಟೀಂ ಇಂಡಿಯಾ ಮಾಜಿ ನಾಯಕ ವಾಲ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಇನಿಂಗ್ಸ್ ಗಳನ್ನು ಆಡಿದ ದ್ರಾವಿಡ್ ಈ ರೀತಿಯ ಹೇಳಿಕೆ ನೀಡಿರುವುದು ಅಚ್ಚರಿಯುಂಟು ಮಾಡಿದೆ.

“ನನ್ನ ಕಾಲಮಾನದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಬೆಸ್ಟ್ ಎದುರಾಳಿಯಾಗಿತ್ತು. ಅವರಲ್ಲಿ ಮೆಕ್ ಗ್ರಾಥ್ ಅತ್ಯುತ್ತಮ ವೇಗದ ಬೌಲರ್ ಆಗಿದ್ದರು” ಎಂದು ಸಮಾರಂಭವೊಂದರಲ್ಲಿ ಮಾತನಾಡುತ್ತಾ ಹೇಳಿದರು.

ಮೆಕ್ ಗ್ರಾತ್ ಮಾಡಿದ ಹಾಗೆ ಯಾರೂ ಕುಡಾ ನನ್ನ ಆಫ್ ಸ್ಟಂಪ್ ತಂತ್ರಗಾರಿಕೆಯನ್ನು ಪ್ರಶ್ನಿಸಿರಲಿಲ್ಲ. ಆತ ರನ್ ನೀಡುವುದರಲ್ಲಿ ತುಂಬಾ ಜಿಪುಣ. ಬೆಳಗಿನ ಅವಧಿಯಲ್ಲಿ ಬೌಲಿಂಗ್ ಮಾಡುತ್ತಿರಲಿ, ಸಂಜೆಯ ಅವಧಿಯಲ್ಲಿರಲಿ, ಆತ ಎಂದಿಗೂ ರನ್ ಬಿಟ್ಟುಕೊಡುತ್ತಿರಲಿಲ್ಲ” ಎಂದು ಅಸ್ಸೀ ಮಾಜಿ ವೇಗಿಯನ್ನು ದ್ರಾವಿಡ್ ಕೊಂಡಾಡಿದ್ದಾರೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯುವರಾಜ್ ಸಿಂಗ್ ಮದುವೆಗೆ ಗೋವಾಗೆ ಬಂದ ವಿಶೇಷ ಅತಿಥಿಗಳಿರವರು