Select Your Language

Notifications

webdunia
webdunia
webdunia
webdunia

ಯುವರಾಜ್ ಸಿಂಗ್ ಮದುವೆಗೆ ಗೋವಾಗೆ ಬಂದ ವಿಶೇಷ ಅತಿಥಿಗಳಿರವರು

ಯುವರಾಜ್ ಸಿಂಗ್ ಮದುವೆಗೆ  ಗೋವಾಗೆ ಬಂದ ವಿಶೇಷ ಅತಿಥಿಗಳಿರವರು
Panaji , ಶನಿವಾರ, 3 ಡಿಸೆಂಬರ್ 2016 (06:04 IST)
ಪಣಜಿ: ಕ್ರಿಕೆಟಿಗ ಯುವರಾಜ್ ಸಿಂಗ್ ಚಂಡೀಘಡದಲ್ಲಿ ಸಿಖ್ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಇದೀಗ ಗೋವಾದಲ್ಲಿ ಹಿಂದೂ ಸಂಪ್ರದಾಯದಂತೆಯೂ ಕೀಚ್ ಹೇಝಲ್ ರನ್ನು ವರಿಸಿದ್ದಾರೆ. ಈ ಮದುವೆಗೆ ವಿಶೇಷ ಜೋಡಿಯೊಂದು ಬಂದಿದೆ.

ಹೌದು. ಯುವರಾಜ್ ಸಿಂಗ್ ಮದುವೆಯಲ್ಲಿ ವಿಶೇಷವಾಗಿ ಗಮನ ಸೆಳೆದ ಈ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ. ಇವರಿಬ್ಬರು ಈ ಮದುವೆಗೆ ಬರುತ್ತಾರೆಂಬ ಸುದ್ದಿಗಳು ಈ ಹಿಂದೆಯೇ ಹಬ್ಬಿತ್ತು. ಅದೀಗ ನಿಜವಾಯಿತು.

ಚಂಡೀಘಡದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ವಿರಾಟ್ ಕೊಹ್ಲಿ ಒಬ್ಬರೇ ಬಂದಿದ್ದರು. ಗೋವಾಗೆ ತಮ್ಮ ಗೆಳತಿಯ ಕೈ ಹಿಡಿದೇ ಬಂದಿದ್ದಾರೆ. ಗೋವಾದಲ್ಲಿ ನಡೆದ ಮದುವೆಗೆ ಕ್ರಿಕೆಟಿಗ ರೋಹಿತ್ ಶರ್ಮಾ, ಜಹೀರ್ ಖಾನ್, ಆಶಿಶ್ ನೆಹ್ರಾ ಹಾಗೂ ಉದ್ಯಮ ಕ್ಷೇತ್ರದ ಗಣ್ಯರೂ ಆಗಮಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇದೇನಾಗಿ ಹೋಯ್ತು ಕರ್ನಾಟಕ ತಂಡಕ್ಕೆ!