Select Your Language

Notifications

webdunia
webdunia
webdunia
webdunia

ಬಿಸಿಸಿಐ ತಲೆಕೆಡಿಸಿಕೊಂಡಿದ್ದರೆ ವಿರಾಟ್ ಕೊಹ್ಲಿ ಏನು ಮಾಡುತ್ತಿದ್ದರು ಗೊತ್ತೇ?

ಬಿಸಿಸಿಐ ತಲೆಕೆಡಿಸಿಕೊಂಡಿದ್ದರೆ ವಿರಾಟ್ ಕೊಹ್ಲಿ ಏನು ಮಾಡುತ್ತಿದ್ದರು ಗೊತ್ತೇ?
Mumbai , ಗುರುವಾರ, 13 ಜುಲೈ 2017 (09:20 IST)
ಮುಂಬೈ: ನಾಯಕನಿಗೂ ಮೆಚ್ಚುಗೆಯಾಗುವಂತಹ ಟೀಂ ಇಂಡಿಯಾ ನೂತನ ಕೋಚ್ ಯಾರಾಗಬಹುದು ಬಿಸಿಸಿಐ ಮತ್ತು ಅದರ ಕ್ರಿಕೆಟ್ ಸಲಹಾ ಸಮಿತಿ ಭಾರತದಲ್ಲಿ ತಲೆಕೆಡಿಸಿಕೊಂಡು ಕೂತಿದ್ದರೆ ಅತ್ತ ವಿರಾಟ್ ಕೊಹ್ಲಿ ಮಾತ್ರ ಅಮೆರಿಕಾದಲ್ಲಿ ತಣ್ಣಗೆ ಕಾಲ ಕಳೆಯುತ್ತಿದ್ದಾರೆ.


ವೆಸ್ಟ್ ಇಂಡೀಸ್ ಸರಣಿ ಮುಗಿಸಿರುವ ಕೊಹ್ಲಿಗೆ ಲಂಕಾ ಸರಣಿಗೂ ಮೊದಲು ಕೆಲ ದಿನ ಬ್ರೇಕ್ ಸಿಕ್ಕಿದೆ. ಅದನ್ನು ಗೆಳತಿ ಅನುಷ್ಕಾ ಜತೆ ಸುತ್ತಾಡುವುದಕ್ಕೆ ಬಳಸಿಕೊಂಡಿದ್ದಾರೆ. ಅಮೆರಿಕಾದ ಬೀದಿಯಲ್ಲಿ ಕೈ ಕೈ ಹಿಡಿದುಕೊಂಡು ಇಬ್ಬರೂ ಆರಾಮವಾಗಿ ಸುತ್ತಾಡುವ ಫೋಟೋಗಳು ಇದೀಗ ವೈರಲ್ ಆಗಿವೆ.

ಈ ಹಿಂದೆಯೂ ಹಲವು ಬಾರಿ ಈ ಜೋಡಿ ಹಲವು ಕಡೆ ಸುತ್ತಾಡಿ ಸುದ್ದಿ ಮಾಡಿತ್ತು. ಸದ್ಯಕ್ಕೆ ತಮ್ಮ ಬ್ಯುಸಿ ಶೆಡ್ಯೂಲ್ ನ ಮಧ್ಯೆಯೂ ಅನುಷ್ಕಾ ಗೆಳೆಯನಿಗಾಗಿ ಸಮಯ ಮೀಸಲಿಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೋಚ್ ಆಗುತ್ತಲೇ ಉಲ್ಟಾ ಹೊಡೆದ ರವಿ ಶಾಸ್ತ್ರಿ