Select Your Language

Notifications

webdunia
webdunia
webdunia
webdunia

ಭಾರತ ಮಹಿಳಾ ತಂಡವೇನಾದ್ರೂ ವಿಶ್ವಕಪ್ ಗೆದ್ದು ಬಿಟ್ಟರೆ ಏನಾಗಬಹುದು ಗೊತ್ತಾ?

ಭಾರತ ಮಹಿಳಾ ತಂಡವೇನಾದ್ರೂ ವಿಶ್ವಕಪ್ ಗೆದ್ದು ಬಿಟ್ಟರೆ ಏನಾಗಬಹುದು ಗೊತ್ತಾ?
London , ಭಾನುವಾರ, 9 ಜುಲೈ 2017 (11:41 IST)
ಲಂಡನ್: ಭಾರತ ಮಹಿಳಾ ಕ್ರಿಕೆಟ್ ತಂಡ ಸದ್ಯಕ್ಕೆ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದೆ. ನಿನ್ನೆ ದ. ಆಫ್ರಿಕಾ ವಿರುದ್ಧ ಪಂದ್ಯ ಬಿಟ್ಟರೆ ಉಳಿದೆಲ್ಲಾ ಪಂದ್ಯಗಳನ್ನು ಗೆದ್ದು ಬೀಗುತ್ತಿದೆ.


ಯುವ ಮಹಿಳೆಯರ ಪಡೆಯನ್ನು ಕಟ್ಟಿಕೊಂಡು ಯಶಸ್ಸು ಕಾಣುತ್ತಿರುವ ನಾಯಕಿ ಮಿಥಾಲಿ ರಾಜ್ ಗೆ ಎಲ್ಲೆಡೆಯಿಂದ ಹೊಗಳಿಕೆ ಕೇಳಿ ಬರುತ್ತಿದೆ. ಇದೀಗ ಪುರುಷರ ತಂಡದ ಸುರೇಶ್ ರೈನಾ ಕೂಡಾ ಹೊಗಳುವವರ ಪಟ್ಟಿಗೆ ಸೇರಿದ್ದಾರೆ.

ದೀಪ್ತಿ ಶರ್ಮಾ ಮತ್ತು ಮಿಥಾಲಿ ರಾಜ್ ಗೆ ಪ್ರತ್ಯೇಕವಾಗಿ ಹೊಗಳಿಕೆ ನೀಡಿರುವ ರೈನಾ, ಒಂದು ವೇಳೆ ಭಾರತ ತಂಡ ಮಹಿಳಾ ವಿಶ್ವಕಪ್ ಗೆದ್ದರೆ, ಭಾರತದ ಕ್ರಿಕೆಟ್ ವಲಯದಲ್ಲೇ ಹೊಸ ಶಕೆ ಆರಂಭವಾಗಲಿದೆ ಎಂದಿದ್ದಾರೆ. ಅವರು ಕಪ್ ಗೆಲ್ಲಲಿ ಎಂದು ಆಶಿಸುತ್ತೇನೆ. ಚಕ್ ದೇ ಇಂಡಿಯಾ ಎಂದು ರೈನಾ ಶುಭ ಹಾರೈಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಏಕಮಾತ್ರ ಟಿ20 ಪಂದ್ಯ ಕ್ರಿಸ್ ಗೇಲ್-ಕೊಹ್ಲಿ ನಡುವಿನ ವಾರ್ ಆಗುತ್ತಾ?