ಇಲ್ಲಿಯವರೆಗೆ ಭಾರತ ಕ್ರಿಕೆಟ್ ತಂಡ ಮತ್ತು ಅದರ ಅಭಿಮಾನಿಗಳು ಎಷ್ಟೆಲ್ಲಾ ಸೋಲುಗಳಿಗೆ ಕಣ್ಣೀರಾಗಿರಬಹುದು. ಆದರೆ 1996ರಲ್ಲಿ ನಡೆದ ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅನುಭವಿಸಿದ ಸೋಲು ಮಾತ್ರ ಎಂದಿಗೂ ಮರೆಯಲಾಗದಂತದ್ದು.
ಅಂದು ಅಸಾಧಾರಣ ಪ್ರದರ್ಶನ ನೀಡಿದ್ದ ಭಾರತ ತಂಡ ಕೊನೆಯ ಕ್ಷಣದಲ್ಲಿ ಸೋಲನ್ನು ಕಂಡಿತ್ತು. ಪಂದ್ಯ ಮುಕ್ತಾಯಗೊಂಡಾಗ ಭಾರತ 7 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಅಂದು ವಿನೋದ್ ಕಾಂಬ್ಳಿ ಅತ್ತ ಪರಿ ಇನ್ನು ಕೂಡ ಕ್ರಿಕೆಟ್ ಪ್ರೇಮಿಗಳ ಕಣ್ಣಿಂದ ಮಾಸಿಲ್ಲ. ಅವರೊಬ್ಬರೇ ಅಲ್ಲ ಮತ್ತೆ ತಂಡದ ಇತರ ಸದಸ್ಯರು ಕೂಡ ಡ್ರೆಸ್ಸಿಂಗ್ ರೂಮ್‌ನಲ್ಲಿ ತಮ್ಮನ್ನು ತಾವು ನಿಯಂತ್ರಿಸದಾದರು.
2014ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇಗಿ ಜಾವಗಲ್ ಶ್ರೀನಾಥ್ ಆ ನೋವಿನ ದಿನವನ್ನು ನೆನಪು ಮಾಡಿಕೊಂಡಿದ್ದರು. ಆಸಕ್ತಿದಾಯಕ ವಿಚಾರವೆಂದರೆ ಆ ಸನ್ನಿವೇಶದಲ್ಲಿ ಒಬ್ಬರು ಮಾತ್ರ ಸ್ಥಿರವಾಗಿದ್ದರು- ಅವರು ಯಾರು ಅಂತೀರಾ? ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್.
ಸೋತ ನಿರಾಶೆಯಲ್ಲಿ ಜಾವಗಲ್ ಸಚಿನ್ ಬಳಿ ಹೋದಾಗ, ಅವರು ಹೇಳಿದ್ದೇನು ಗೊತ್ತಾ? ಈ ವಿಡಿಯೋ ನೋಡಿ.
1996ರ ವಿಶ್ವಕಪ್ ಸೋತಾಗ ಡ್ರೆಸ್ಸಿಂಗ್ ರೂಮ್‌ನಲ್ಲಿ ಸಚಿನ್ ಹೇಳಿದ್ದೇನು? (ವಿಡಿಯೋ)