ವೆಸ್ಟ್ ಇಂಡೀಸ್ ತಂಡಕ್ಕೆ ಐದನೇ ಮತ್ತು ಅಂತಿಮ ದಿನದಂದು ಸೋಲಿನಿಂದ ಪಾರು ಮಾಡಲು ಹೀರೋ ಅಗತ್ಯವಿತ್ತು. ರೋಸ್ಟೊನ್ ಚೇಸ್ ಹೀರೊ ರೂಪದಲ್ಲಿ ಆಗಮಿಸಿ ತಂಡವನ್ನು ಪಾರು ಮಾಡಿದರು. ಆಲ್‌ರೌಂಡರ್ ಅಜೇಯ 137 ರನ್ ಗಳಿಸಿ ವೆಸ್ಟ್ ಇಂಡೀಸ್‌ಗೆ ಡ್ರಾ ಸಾಧ್ಯವಾಗಿಸಿದರು.
ಎರಡನೇ ಪಂದ್ಯದಲ್ಲಿ ಆಡುತ್ತಿರುವ ಚೇಸ್ ಟೆಸ್ಟ್‌ನಲ್ಲಿ ಐದು ವಿಕೆಟ್ ಮತ್ತು ಶತಕ ಗಳಿಸಿದ ನಾಲ್ಕನೇ ವೆಸ್ಟ್ ಇಂಡಿಯನ್ ಆಗಿ ಎಲೈಟ್ ಪಟ್ಟಿಗೆ ಸೇರಿದರು. ತಾವು ಪಂದ್ಯವನ್ನು ಡ್ರಾಮಾಡಿದ್ದಕ್ಕೆ ಸಂತಸವಾಗಿದೆ. ನಾನು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಮಾನವಾಗಿ ಶ್ರೇಷ್ಟ ಸಾಧನೆಗೆ ಬಯಸುತ್ತೇನೆ ಎಂದು ಚೇಸ್ ಹೇಳಿದರು.
ನಾಯಕ ಸ್ವಲ್ಪ ಹೋರಾಟದ ಮನೋಭಾವ ತೋರಿಸುವಂತೆ ಆಟಗಾರರಿಗೆ ಹೇಳಿದರು. ನಾವು ಯುದ್ಧ ಮಾಡುತ್ತಿದ್ದೇವೆಂದೂ ಇಂದು ಸಾಯಬಾರದೆಂಬ ಮನಸ್ಥಿತಿಯೊಂದಿಗೆ ರಣಾಂಗಣಕ್ಕೆ ಇಳಿದೆವು. ನಾನು ಮತ್ತು ಡೌರಿಕ್ ಮಾತನಾಡಿ ನಮ್ಮಿಬ್ಬರಲ್ಲಿ ಒಬ್ಬರು ಶತಕ ಗಳಿಸಿದರೆ ನಾವು ಸುರಕ್ಷಿತವಾಗಿರುವುದಾಗಿ ಹೇಳಿದ್ದೆವು ಎಂದು ಚೇಸ್ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.