Publish Date: Mon, 05 Apr 2021 (09:48 IST)
Updated Date: Mon, 05 Apr 2021 (09:50 IST)
ಚೆನ್ನೈ: ಟೀಂ ಇಂಡಿಯಾ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ತಮ್ಮ ಮನೆಗೆ ಹೊಸ ನಾಯಿಯೊಂದನ್ನು ಕರೆತಂದಿದ್ದಾರೆ. ಈ ನಾಯಿಗೆ ಅವರಿಟ್ಟ ಹೆಸರು ಎಲ್ಲರ ಗಮನಸೆಳೆದಿದೆ.
ಆಸ್ಟ್ರೇಲಿಯಾ ಸರಣಿ ವಾಷಿಂಗ್ಟನ್ ಸುಂದರ್ ಅದ್ಭುತ ಪ್ರದರ್ಶನ ನೀಡಿದ್ದರು. ಅದರಲ್ಲೂ ಗಬ್ಬಾ ಮೈದಾನದಲ್ಲಿ ಅವರು ಆಡಿದ ಇನಿಂಗ್ಸ್ ನಿಂದಾಗಿ ಭಾರತ ಸರಣಿ ಉಳಿಸಿಕೊಂಡಿತ್ತು.
ಇದರ ಸ್ಮರಣಾರ್ಥ ಸುಂದರ್ ತಮ್ಮ ಮನೆಯ ನಾಯಿಗೆ ಗಬ್ಬಾ ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ತಮ್ಮ ಸ್ಮರಣೀಯ ಇನಿಂಗ್ಸ್ ಆಡಿದ ಮೈದಾನವನ್ನು ಎಂದೆಂದಿಗೂ ನೆನಪಿನಲ್ಲಿಟ್ಟುಕೊಳ್ಳಲಿದ್ದಾರೆ. ಅಂದ ಹಾಗೆ ನಾಯಿಗೆ ಸುಂದರ್ ಈ ಹೆಸರನ್ನು ಪ್ರೀತಿಯಿಂದಲೇ ಇಟ್ಟುಕೊಂಡಿದ್ದಾರಂತೆ.