ಹೈದರಾಬಾದ್: ಈ ಮಾತು ಹೇಳಿದ್ರೆ ಯಾರಾದ್ರೂ ನಂಬ್ತಾರಾ? ಆದರೆ ಸ್ವತಃ ವಿವಿಎಸ್ ಲಕ್ಷ್ಮಣ್ ಹೇಳಿದ ಮೇಲೆ ನಂಬಲೇ ಬೇಕು. ಆಸ್ಟ್ರೇಲಿಯಾ ವಿರುದ್ಧ ಸದಾ ಉತ್ತಮಾಗಿ ಆಡುತ್ತಿದ್ದ ಲಕ್ಷ್ಮಣ್ ತಾವು ಕೂಡಾ ಎದುರಾಳಿಗಳ ಮೇಲೆ ಸ್ಲೆಡ್ಜಿಂಗ್ ಮಾಡುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ.
ಕ್ರಿಕೆಟ್ ನ ಜಂಟಲ್ ಮ್ಯಾನ್ ಎನಿಸಿಕೊಂಡಿದ್ದ ಲಕ್ಷ್ಮಣ್ “ನಾನು ಪಾಪದ ಮನುಷ್ಯ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ನಾನು ಸ್ಲೆಡ್ಜಿಂಗ್ ಮಾಡುತ್ತಿದ್ದೆ. ಆದರೂ ಒಳ್ಳೆ ಹುಡುಗನಾಗಿದ್ದೆ” ಎಂದು ತಮಾಷೆ ಮಾಡಿಕೊಂಡಿದ್ದಾರೆ.
ಆಸ್ಟ್ರೇಲಿಯಾ ಸರಣಿ ಆರಂಭವಾಗುತ್ತಿದ್ದಂತೆ ಸ್ಲೆಡ್ಜಿಂಗ್ ಬಗ್ಗೆ ಮಾತುಗಳು ಜೋರಾಗುತ್ತಿವೆ. ಈ ಹಿನ್ನಲೆಯಲ್ಲಿ ಸಂದರ್ಶನವೊಂದರಲ್ಲಿ ಮನದಾಳದ ಮಾತು ಹಂಚಿಕೊಂಡಿರುವ ಲಕ್ಷ್ಮಣ್ ಸ್ಲೆಡ್ಜಿಂಗ್ ಮಾಡುವುದರಲ್ಲಿ ಆಸ್ಟ್ರೇಲಿಯಾದವರಿಗಿಂತ ಟೀಂ ಇಂಡಿಯಾದವರೇ ಒಂದು ಹೆಜ್ಜೆ ಮುಂದು ಎಂದಿದ್ದಾರೆ.
ಭಾರತೀಯ ಕ್ರಿಕೆಟಿಗರ ಹಾಗೆ ಎದುರಾಳಿಗಳ ಮೇಲೆ ಮಾನಸಿಕ ಯುದ್ಧ ಹೇರಲು ಆಸೀಸ್ ಆಟಗಾರರಿಗೆ ಗೊತ್ತಿಲ್ಲ. ಜಹೀರ್ ಖಾನ್ ಈ ವಿಷಯದಲ್ಲಿ ನಂ.1. ಎರಡನೆಯ ಸ್ಥಾನ ಹರ್ಭಜನ್ ಸಿಂಗ್ ಗೆ ಸಲ್ಲಬೇಕು. ಎದುರಾಳಿಗಳನ್ನು ತಮ್ಮ ನೋಟದಲ್ಲೇ ಧೃತಿಗೆಡಿಸುವ ಆಟಗಾರರು ಇವರು ಎಂದು ಲಕ್ಷ್ಮಣ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ