Publish Date: Mon, 30 Jan 2017 (10:24 IST)
Updated Date: Mon, 30 Jan 2017 (10:28 IST)
ನವದೆಹಲಿ: ನಿನ್ನೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟಿ-ಟ್ವೆಂಟಿ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಿದ್ದು ನೋಡಿ ಕ್ರಿಕೆಟ್ ಜಗತ್ತಿನ ದಿಗ್ಗಜರು ಮೂಕ ವಿಸ್ಮಿತರಾಗಿದ್ದಾರೆ.
ಕೊನೆಯ ಓವರ್ ನಲ್ಲಿ ಕೇವಲ ಮೂರು ರನ್ ನೀಡಿ ಎರಡು ವಿಕೆಟ್ ಕಬಳಿಸಿದ್ದ ಬುಮ್ರಾ ಬೌಲಿಂಗ್ ನೋಡಿ ವೀರೇಂದ್ರ ಸೆಹ್ವಾಗ್ ಗೆ ಮಾತೇ ಮರೆತು ಹೋಗಿದೆಯಂತೆ. ಇದು ತಾನು ನೋಡಿದ ಅತ್ಯುತ್ತಮ ಕೊನೆಯ ಓವರ್ ಗಳಲ್ಲೊಂದು ಎಂದು ಸೆಹ್ವಾಗ್ ಬಣ್ಣಿಸಿದ್ದಾರೆ. ಅಲ್ಲದೆ ತಮ್ಮ ಎಂದಿನ ಶೈಲಿಯಲ್ಲಿ ಬುಮ್ರಾ ಥೇಟ್ ಬುಮ್ರಾ ಆದರು ಎಂದಿದ್ದಾರೆ.
ಇನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡಾ ನೆಹ್ರಾ ಮತ್ತು ಬುಮ್ರಾಗೆ ಟ್ವಿಟರ್ ನಲ್ಲಿ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಇದೇ ರೀತಿ ಗೆಲ್ಲುತ್ತಿರಿ ಎಂದು ಕ್ರಿಕೆಟ್ ದೇವರು ಆಶೀರ್ವದಿಸಿದ್ದಾರೆ. ಇನ್ನು ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡಾ ಇಬ್ಬರು ವೇಗಿಗಳ ಗುಣಗಾನ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ