ನವದೆಹಲಿ: ವೀರೇಂದ್ರ ಸೆಹ್ವಾಗ್ ಒಂದು ಕಾಲದ ನವಜೋತ್ ಸಿಂಗ್ ಸಿಧು ರೀತಿ ಆಗಾಗ ಭರ್ಜರಿ ಕಾಮೆಂಟ್ ಮಾಡುತ್ತಿರುತ್ತಾರೆ. ಸದ್ಯಕ್ಕೆ ಕಾಮೆಂಟೇಟರ್ ಕೆಲಸ ಮಾಡುತ್ತಿರುವ ಸೆಹ್ವಾಗ್ ಜೇಮ್ಸ್ ಆಂಡರ್ಸನ್ ರ ಕಾಲೆಳೆದಿದ್ದಾರೆ.
ದ್ವಿತೀಯ ಟೆಸ್ಟ್ ನಲ್ಲಿ ಆಂಡರ್ಸನ್ ಎರಡೂ ಇನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಅದನ್ನು ನೋಡಿ ಸೆಹ್ವಾಗ್ ಮೊಗದಲ್ಲಿ ನಗು ಮೂಡಿದೆ. ಯಾಕೆಂದರೆ ಅವರಿಗೆ 2011 ರ ಘಟನೆಯೊಂದು ನೆನಪಿಗೆ ಬಂದಿದೆ.
2011ರಲ್ಲಿ ಆಂಡರ್ಸನ್ ನನ್ನನ್ನು ಎರಡೂ ಇನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟ್ ಮಾಡಿ ಶೂನ್ಯ ಕಂಡುಹಿಡಿದ ಆರ್ಯಭಟನಿಗೆ ಅರ್ಪಣೆ ಮಾಡುವಂತೆ ಮಾಡಿದ್ದರು. ಇದೀಗ ಸ್ವತಃ ಆಂಡರ್ಸನ್ ಆ ಸಾಧನೆ ಮಾಡಿದ್ದಾರೆ ಎಂದು ಸೆಹ್ವಾಗ್ ಆಂಡರ್ಸನ್ ಅವರನ್ನು ಕಿಚಾಯಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ