Select Your Language

Notifications

webdunia
webdunia
webdunia
webdunia

ರವಿಚಂದನ್ ಅಶ್ವಿನ್ ಕಾಫಿ ವಿತ್ ನೌಕಾದಳ!

ರವಿಚಂದನ್ ಅಶ್ವಿನ್ ಕಾಫಿ ವಿತ್ ನೌಕಾದಳ!
Vishakha Pattanam , ಮಂಗಳವಾರ, 22 ನವೆಂಬರ್ 2016 (09:39 IST)
ವಿಶಾಖಪಟ್ಟಣಂ: ಟೀಂ ಇಂಡಿಯಾದ ಪ್ರಮುಖ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್
ವಿರುದ್ಧ ಟೆಸ್ಟ್ ಗೆಲುವು ಕೊಡಿಸಿದ ನಂತರ ನೌಕಾದಳದವರೊಂದಿಗೆ ಸಮಯ ಕಳೆದಿದ್ದಾರೆ. ಅವರ ಜತೆ ಕಾಫಿ ಕುಡಿಯುತ್ತಾ ಸಂವಾದ ನಡೆಸಿದ್ದಾರೆ.

 
ಈ ಬಗ್ಗೆ ತಮ್ಮ ಟ್ವಿಟರ್ ಪೇಜ್ ನಲ್ಲಿ ಖುಷಿಯಿಂದ ಬರೆದುಕೊಂಡಿರುವ ಅಶ್ವಿನ್ ಕೊನೆಗೂ ಭರವಸೆ ಈಡೇರಿಸಲು ಸಫಲನಾದೆ ಎಂದಿದ್ದಾರೆ. ಐಎನ್ಎಸ್ ಜಲಶ್ವಾಗೆ ಭೇಟಿ ನೀಡಿದ ಅಶ್ವಿನ್ ರನ್ನು ನೌಕಾ ದಳದ ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ನೌಕಾದಳದವರೊಂದಿಗೆ ಫೋಟೋ ತೆಗೆಸಿಕೊಂಡು ಟೆಸ್ಟ್ ಪಂದ್ಯದ ಗೆಲುವು ಆಚರಿಸಿಕೊಂಡ ಅಶ್ವಿನ್, ನಿರ್ಗಮಿಸುವ ಮೊದಲು ಅಲ್ಲಿನ ಡೈರಿಯಲ್ಲಿ ದೇಶ ಕಾಯುವ ಸೈನಿಕರ ಬಗ್ಗೆ ದೀಪಾವಳಿ ಸಂದರ್ಭದಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದೆ. ಇಂದು ಅವರ ಜತೆ ಕೆಲ ಹೊತ್ತು ಕಳೆಯಲು ಅವಕಾಶ ಸಿಕ್ಕಿದ್ದು ನನಗೆ ಸಿಕ್ಕಿದ ಗೌರವ ಎಂದು ಬರೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಸಿಐ ಪದಾದಿಕಾರಿಗಳ ವಜಾಕ್ಕೆ ಶಿಫಾರಸ್ಸು ಮಾಡಿದ ಲೋಧಾ ಸಮಿತಿ