Select Your Language

Notifications

webdunia
webdunia
webdunia
webdunia

ವೀರೇಂದರ್ ಸೆಹ್ವಾಗ್ ಬರ್ತ್ ಡೇಗೆ ಶುಭಾಶಯಗಳ ಮಹಾಪೂರ

ವೀರೇಂದರ್ ಸೆಹ್ವಾಗ್ ಬರ್ತ್ ಡೇಗೆ ಶುಭಾಶಯಗಳ ಮಹಾಪೂರ
NewDelhi , ಗುರುವಾರ, 20 ಅಕ್ಟೋಬರ್ 2016 (14:22 IST)
ನವದೆಹಲಿ: ಭಾರತದ ಡ್ಯಾಶಿಂಗ್ ಓಪನರ್ ಆಗಿದ್ದ ಕ್ರಿಕೆಟಿಗ ವೀರೇಂದರ್ ಸೆಹ್ವಾಗ್ ಗೆ ಇಂದು ಜನುಮ ದಿನ. ಸ್ಪೋಟಕ ಬ್ಯಾಟ್ಸ್ ಮನ್ ಹುಟ್ಟುಹಬ್ಬಕ್ಕೆ ಸಚಿನ್ ತೆಂಡುಲ್ಕರ್ ಆದಿಯಾಗಿ ಹಲವರು ಶುಭ ಹಾರೈಸಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ಶುಭಾಶಯ ಕೋರಿರುವ ಸಚಿನ್, ಸಾಕಷ್ಟು ವಿನಾಶಕ್ಕೆ ಕಾರಣನಾದ ಚೆಂದದ ಮನಸಿನ ವ್ಯಕ್ತಿ ಆತ. ಹ್ಯಾಪಿ ಬರ್ತ್ ಡೇ ವೀರೂ ಎಂದು ಪ್ರೀತಿ ಪೂರ್ವಕವಾಗಿ ತೆಂಡುಲ್ಕರ್ ಶುಭ ಹಾರೈಸಿದ್ದಾರೆ.

ಇನ್ನು ಸೆಹ್ವಾಗ್ ಅವರನ್ನು ಸದಾ ಕೊಂಡಾಡುವ ಸೌರವ್ ಗಂಗೂಲಿ ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ನಾಟ್ ವೆಸ್ಟ್ ಸರಣಿಯಲ್ಲಿ 325 ರನ್ ಚೇಸ್ ಮಾಡುತ್ತಿದ್ದಾಗ ಸೆಹ್ವಾಗ್ ಶಿಳ್ಳೆ ಹಾಕಿ “ಕ್ಯಾಪ್ಟನ್ ನಾವು ಗೆಲ್ಲುತ್ತೇವೆ” ಎಂದು ಕುಣಿದಾಡಿದ್ದರಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ವೀರೇಂದ್ರ ಸೆಹ್ವಾಗ್ ಕೆಣಕಿದ ಬ್ರಿಟಿಷ್ ಪತ್ರಕರ್ತ!