ನವದೆಹಲಿ: ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆಗಾಗ ತಮ್ಮ ದೇಶ ಪ್ರೇಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೊರ ಹಾಕುತ್ತಿರುತ್ತಾರೆ. ಈ ಬಾರಿ ಅವರು ಬಿಎಸ್ಎಫ್ ಯೋಧರ ಪರ ಟ್ವಿಟರ್ ನಲ್ಲಿ ಮಾತನಾಡಿದ್ದಾರೆ.
ಮೊನ್ನೆಯಷ್ಟೇ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಫೇಸ್ ಬುಕ್ ನಲ್ಲಿ ತಮ್ಮ ದುಸ್ಥಿತಿ ಬಗ್ಗೆ ವಿಡಿಯೋ ಅಪ್ ಲೋಡ್ ಮಾಡಿದ್ದು, ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಯೋಧರಿಗೆ ಸರಿಯಾದ ಆಹಾರ ನೀಡಲಾಗುತ್ತಿಲ್ಲ ಎಂದು ವಿಡಿಯೋದಲ್ಲಿ ಯಾದವ್ ಆಪಾದಿಸಿದ್ದರು. ಆದರೆ ಇದೆಲ್ಲಾ ಸುಳ್ಳು ಆರೋಪ ಎಂದು ಸೇನೆ ಪ್ರಕರಣಕ್ಕೆ ತೇಪೆ ಹಚ್ಚುವ ಕೆಲಸ ಮಾಡಿತು.
ಆದರೆ ಈ ಬಗ್ಗೆ ಮಾತನಾಡಿರುವ ವೀರೂ “ಏನೇ ಆಗಿರಲಿ, ಮಾಡಿರಲಿ, ನಮ್ಮ ಸೈನಿಕರು ಮತ್ತು ರೈತರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವರಿಗೆಲ್ಲಾ ಸರಿಯಾದ ಆಹಾರ ಸಿಗುವಂತಾಗಬೇಕು” ಎಂದು ವೀರೂ ಟ್ವೀಟ್ ಮಾಡಿದ್ದಾರೆ.
ಅವರು ನಮ್ಮನ್ನು ರಕ್ಷಿಸುತ್ತಿರುವಾಗ ಅವರಿಗೆ ಸರಿಯಾದ ಆಹಾರ, ವಸತಿ ಒದಗಿಸುವುದು ನಮ್ಮ ಕರ್ತವ್ಯ ಎಂದು ಹಲವು ವೀರೂ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ. ಅದಲ್ಲದೆ, ತೇಜ್ ಪಾಲ್ ವಿಡಿಯೋ ನೋಡಿ ನಿಜಕ್ಕೂ ಬೇಸರವಾಗಿದೆ ಎಂದು ವೀರೂ ಹೇಳಿಕೊಂಡಿದ್ದಾರೆ.
ಇನ್ನೊಂದೆಡೆ ವೀರೂ ಹಾದಿಯಲ್ಲಿ ಇತರ ಕ್ರಿಕೆಟಿಗರೂ ಸಾಗಿದ್ದಾರೆ. ತೇಜ್ ಪಾಲ್ ವಿಡಿಯೋವನ್ನು ಎಷ್ಟು ಸಾಧ್ಯವೋ ಅಷ್ಟು ಶೇರ್ ಮಾಡಿ ಎಂದು ಹರ್ಭಜನ್ ಸಿಂಗ್ ಹೇಳಿದ್ದರೆ, ಮಾತು ಸಾಕು, ಅವರಿಗೆ ಸರಿಯಾದ ಆಹಾರ ನೀಡಿ ಎಂದು ಮೊಹಮ್ಮದ್ ಕೈಫ್ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ