Publish Date: Wed, 02 Jan 2019 (10:37 IST)
Updated Date: Wed, 02 Jan 2019 (10:39 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ನಲ್ಲಿ ನಡೆದ ಟೆಸ್ಟ್ ಪಂದ್ಯದ ಎರಡನೇ ದಿನ ಪಂದ್ಯದ ನಡುವೆ ಬೆನ್ನು ನೋವಿಗೆ ತುತ್ತಾದ ಕೊಹ್ಲಿ ಫಿಟ್ ನೆಸ್ ಬಗ್ಗೆ ಪತ್ರಕರ್ತರು ಪ್ರಶ್ನೆ ಮಾಡಿದಾಗ ಅವರು ರಹಸ್ಯವೊಂದನ್ನು ಬಹಿರಂಗಪಡಿಸಿದ್ದಾರೆ.
ಕಳೆದ ಬಾರಿ ಐಪಿಎಲ್ ಮುಗಿದ ಮೇಲೆ ಬೆನ್ನು ನೋವಿನಿಂದಾಗಿ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದಿದ್ದ ಕೊಹ್ಲಿಗೆ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲೂ ಬೆನ್ನು ನೋವು ಕಾಡಿತ್ತು. ಈ ರೀತಿ ಪದೇ ಪದೇ ಬೆನ್ನು ನೋವು ಕಾಡುತ್ತಿರುವುದರಿಂದ ನೀವು ಫಿಟ್ ಆಗಿಲ್ಲವೇ ಎಂದು ಪತ್ರಕರ್ತರು ಅವರನ್ನು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಕೊಹ್ಲಿ 2011 ರಿಂದ ಅಂದರೆ ಎಂಟು ವರ್ಷದ ಹಿಂದಿನಿಂದಲೂ ನನಗೆ ಈ ಸಮಸ್ಯೆ ಇದೆ. ಇದು ಹೊಸದೇನಲ್ಲ ಎಂದು ಬಹಿರಂಗಪಡಿಸಿದ್ದಾರೆ. ಆದರೆ ಇದು ಗಂಭೀರವಲ್ಲ. ನಾನು ದೈಹಿಕ ವ್ಯಾಯಾಮದ ಮೂಲಕ ಇದನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದೇನೆ ಎಂದು ರನ್ ಮೆಷಿನ್ ಕೊಹ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ