Webdunia - Bharat's app for daily news and videos

Install App

ವಿರಾಟ್ ಕೊಹ್ಲಿ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಾಯಕರಾಗುವುದು ಬೇಡ: ಸುನಿಲ್ ಗವಾಸ್ಕರ್

Webdunia
ಬುಧವಾರ, 11 ಮೇ 2016 (12:22 IST)
ವಿರಾಟ್ ಕೊಹ್ಲಿ ಅವರು ಸೀಮಿತ ಓವರುಗಳ ಸ್ವರೂಪದಲ್ಲಿ ಅತ್ಯುತ್ತಮ ಬ್ಯಾಟ್ಸ್‌‍ಮನ್ ಆಗಿದ್ದರೂ ಸೀಮಿತ ಓವರುಗಳ ಪಂದ್ಯದ ನಾಯಕತ್ವಕ್ಕೆ ಕೂಡಲೇ ತರಬಾರದು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. 2015-16ರ ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರ ಸರಾಸರಿ ಸ್ಕೋರು 95.57 ಇದ್ದಿದ್ದರೆ, ಪ್ರಸಕ್ತ ಐಪಿಎಲ್‌ನಲ್ಲಿ ಕೊಹ್ಲಿ 9 ಪಂದ್ಯಗಳಲ್ಲಿ 561 ರನ್ ನೆರವಿನಿಂದ  ಪ್ರಮುಖ ರನ್ ಸ್ಕೋರರ್ ಆಗಿದ್ದಾರೆ.

ಕೊಹ್ಲಿ ಐಪಿಎಲ್ ದಾಖಲೆಗಳನ್ನು ಕೂಡ ಮುರಿಯುತ್ತಿದ್ದು, ಪ್ರತ್ಯೇಕ ಸೀಸನ್‌ಗಳಲ್ಲಿ 500 ಪ್ಲಸ್ ರನ್ ಗಳಿಸಿದ ಮೊದಲ ನಾಯಕನಾಗಿ ಸಚಿನ್ ತೆಂಡೂಲ್ಕರ್ ಹೆಸರನ್ನು ದಾಖಲೆ ಪುಸ್ತಕದಿಂದ ಅಳಿಸಿಹಾಕಿದ್ದಾರೆ.  ರಾಯಲ್ ಚಾಲೆಂಜರ್ಸ್ ಪರ ಎರಡು ಶತಕಗಳನ್ನು ಬಾರಿಸಿ, ಐಪಿಎಲ್ ಇತಿಹಾಸದಲ್ಲಿ  ಈ ಸಾಧನೆ ಮಾಡಿದ  ಮೊದಲ ನಾಯಕನೆನಿಸಿದ್ದಾರೆ.
 
2015/16 ರ  ಏಕ ದಿನ ಪಂದ್ಯಗಳಲ್ಲಿ 62.6 ಸರಾಸರಿಯಲ್ಲಿ ಮೂರು ಶತಕಗಳೊಂದಿಗೆ 626 ರನ್ ಸ್ಕೋರ್ ಮಾಡಿದರು. ಟೆಸ್ಟ್ ಪಂದ್ಯಗಳಲ್ಲಿ ಕೂಡ ಕೊಹ್ಲಿ ನಾಯಕತ್ವವು ಶ್ರೀಲಂಕಾ ವಿರುದ್ಧ ಸರಣಿ ಜಯ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 3-0 ಸರಣಿ ಜಯದ ಮೂಲಕ ಉತ್ತಮ ಆರಂಭ ಸಿಕ್ಕಿದೆ.
 
ಭಾರತದ ಮಾಜಿ ನಾಯಕ ಗಂಗೂಲಿ ಕೂಡ ಕೊಹ್ಲಿಗೆ ಏಕದಿನ ಪಂದ್ಯಗಳು ಮತ್ತು ಟಿ ಟ್ವೆಂಟಿ ನಾಯಕತ್ವ ಹಸ್ತಾಂತರಿಸುವಂತೆ ಕೇಳಿದ್ದಾರೆ. ಆದಾಗ್ಯೂ ಗವಾಸ್ಕರ್ ಕೊಹ್ಲಿಗೆ ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಎಚ್ಚರಿಸಿದ್ದಾರೆ. ವಿರಾಟ್ ಅವರನ್ನು ತಕ್ಷಣವೇ ಎಲ್ಲಾ ಸ್ವರೂಪದ ಆಟಗಳಿಗೆ ನಾಯಕನ್ನಾಗಿ ಮಾಡಬಾರದು. ಈ ಮಾದರಿಗಳ ಆಟದಲ್ಲಿ  ಅವರು ಬೆಳೆಯಲಿ, 2019ರ ವಿಶ್ವ ಕಪ್ ಇನ್ನೂ ದೂರದಲ್ಲಿದೆ ಎಂದು ಪ್ರತಿಕ್ರಿಯಿಸಿದರು. 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments