ಲಂಡನ್: ವಿರಾಟ್ ಕೊಹ್ಲಿಗೆ ಏನಾಯ್ತು ಎಂದು ಗಾಬರಿಯಾಗುವುದು ಬೇಡ. ವಿರಾಟ್ ಕೊಹ್ಲಿಯ 10 ವರ್ಷಗಳ ಐಪಿಎಲ್ ಯಾತ್ರೆಯ ಕುರಿತಾದ ವರ್ಣಚಿತ್ರವೊಂದು 2.9 ಮಿಲಿಯನ್ ಪೌಂಡ್ ಗೆ ಹರಾಜಾಗಿದೆ.
ಭಾರತೀಯ ಮೂಲದ ಬ್ರಿಟನ್ ಉದ್ಯಮಿ ಪೂನಂ ಗುಪ್ತಾ ಕೊಹ್ಲಿ ಕುರಿತಾದ ಈ ಪೈಂಟಿಂಗ್ ನ್ನು ಭಾರೀ ಮೊತ್ತಕ್ಕೆ ಖರೀದಿ ಮಾಡಿದ್ದಾರೆ. ಮೊನ್ನೆಯಷ್ಟೇ ಕೊಹ್ಲಿ ತಮ್ಮ ಚ್ಯಾರಿಟಿ ಸಂಸ್ಥೆಗಾಗಿ ಔತಣಕೂಟವೊಂದನ್ನು ಏರ್ಪಡಿಸಿದ್ದರು.
ಸಷಾ ಜ್ಯಾಫ್ರಿ ಈ ವರ್ಣಚಿತ್ರವನ್ನು ಬಿಡಿಸಿದ್ದಾರೆ. ಒಂದು ಉತ್ತಮ ಉದ್ದೇಶಕ್ಕಾಗಿ ಭಾರತೀಯ ಕ್ರಿಕೆಟಿಗರು ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ನಾನೊಂದು ಅದ್ಭುತ ಪೇಂಟಿಂಗ್ ಮನೆಗೆ ತೆಗೆದುಕೊಂಡು ಹೋಗುವುದರ ಜತೆಗೆ ಒಂದು ಉತ್ತಮ ಕೆಲಸಕ್ಕೆ ಕೈಜೋಡಿಸುತ್ತಿದ್ದೇನೆ ಎಂಬ ಖುಷಿಯಿದೆ ಎಂದು ಪೂನಂ ಗುಪ್ತಾ ಹೇಳಿಕೊಂಡಿದ್ದಾರೆ.