Select Your Language

Notifications

webdunia
webdunia
webdunia
webdunia

ಕ್ರಿಕೆಟ್ ಆಸ್ಟ್ರೇಲಿಯಾದ ಏಕದಿನ ತಂಡಕ್ಕೂ ವಿರಾಟ್ ಕೊಹ್ಲಿಯೇ ನಾಯಕ

ವಿರಾಟ್ ಕೊಹ್ಲಿ
Sydney , ಮಂಗಳವಾರ, 27 ಡಿಸೆಂಬರ್ 2016 (17:41 IST)
ಸಿಡ್ನಿ: ಕ್ರಿಕೆಟ್ ಆಸ್ಟ್ರೇಲಿಯಾ ವರ್ಷದ ಏಕದಿನ ತಂಡ ಪ್ರಕಟಿಸಿದ್ದು, ಇದಕ್ಕೆ ತನ್ನದೇ ದೇಶದ ಸ್ಟೀವ್ ಸ್ಮಿತ್ ರನ್ನು ಕಡೆಗಣಿಸಿ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಕ್ಯಾಪ್ಟನ್ ಮಾಡಿದೆ.


ಕೊಹ್ಲಿ ಜತೆಗೆ ಕ್ರಿಕೆಟ್ ಆಸ್ಟ್ರೇಲಿಯಾದ ಏಕದಿನ ತಂಡದಲ್ಲಿ ಸ್ಥಾನ ಪಡೆದ ಇನ್ನೊಬ್ಬ ಟೀಂ ಇಂಡಿಯಾ ಆಟಗಾರನೆಂದರೆ ಬೌಲರ್ ಜಸ್ಪ್ರೀತ್ ಬುಮ್ರಾ. ಟೀಂ ಇಂಡಿಯಾ ನಾಯಕ 2016 ರಲ್ಲಿ ಆಡಿದ್ದು 10 ಏಕದಿನ ಪಂದ್ಯವಾದರೂ, ಅದರಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.

10 ಪಂದ್ಯಗಳ ಪೈಕಿ 8 ಪಂದ್ಯಗಳಲ್ಲಿ ಕೊಹ್ಲಿ 45 ಪ್ಲಸ್ ರನ್ ಗಳಿಸಿದ್ದರು. 59 ಬಾರಿ ಟೀಂ ಇಂಡಿಯಾ ಯಶಸ್ವಿಯಾಗಿ ರನ್ ಚೇಸ್ ಮಾಡುವಲ್ಲಿ ಅವರ ಪಾತ್ರ ಪ್ರಮುಖವಾದುದು. ಈ ಕಾರಣಗಳಿಂದ ಅವರನ್ನು ಏಕದಿನ ತಂಡಕ್ಕೆ ನಾಯಕನಾಗಿ ಮಾಡಲಾಗಿದೆ.

ಏಕದಿನ ತಂಡ: ವಿರಾಟ್ ಕೊಹ್ಲಿ (ನಾಯಕ),  ಡೇವಿಡ್ ವಾರ್ನರ್, ಕ್ವಿಂಟನ್ ಡಿ ಕೊಕ್, ಸ್ಟೀವ್ ಸ್ಮಿತ್, ಬಾಬರ್ ಅಝಮ್, ಮಿಚೆಲ್ ಮಾರ್ಷ್, ಜೋಸ್ ಬಟ್ಲರ್, ಜಸ್ಪ್ರೀತ್ ಬುಮ್ರಾ, ಇಮ್ರಾನ್ ತಾಹಿರ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

117 ವರ್ಷದ ಹಳೆಯ ದಾಖಲೆ ಮುರಿದ ರಣಜಿ ಆಟಗಾರ