Select Your Language

Notifications

webdunia
webdunia
webdunia
webdunia

ಮಹಿಳಾ ಕ್ರಿಕೆಟರ್ ವಿಷಯದಲ್ಲಿ ಎಡವಟ್ಟು ಮಾಡಿ ನಗೆ ಪಾಟಲಿಗೀಡಾದ ವಿರಾಟ್ ಕೊಹ್ಲಿ

ಮಹಿಳಾ ಕ್ರಿಕೆಟರ್ ವಿಷಯದಲ್ಲಿ ಎಡವಟ್ಟು ಮಾಡಿ ನಗೆ ಪಾಟಲಿಗೀಡಾದ ವಿರಾಟ್ ಕೊಹ್ಲಿ
Mumbai , ಗುರುವಾರ, 13 ಜುಲೈ 2017 (10:41 IST)
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ನಿನ್ನೆ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಮೂರು ವಿಶ್ವ ದಾಖಲೆ ನಿರ್ಮಿಸಿದ್ದು ಭಾರೀ ಹೊಗಳಿಕೆಗೆ ಪಾತ್ರರಾಗಿದ್ದಾರೆ. ಭಾರತದ ಪುರುಷರ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಾತ್ರ ಹೊಗಳಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.


ಸದ್ಯಕ್ಕೆ ಅಮೆರಿಕಾದಲ್ಲಿ ರಜಾ ಮಜಾ ಮಾಡುತ್ತಿರುವ ಕೊಹ್ಲಿ ಎಲ್ಲರಂತೆ ತಾವೂ ಫೇಸ್ ಬುಕ್ ಪೇಜ್ ನಲ್ಲಿ ‘ಭಾರತೀಯ ಕ್ರಿಕೆಟ್ ಗೆ ಸ್ಮರಣಾರ್ಹ ದಿನ. ಏಕದಿನ ಪಂದ್ಯಗಳಲ್ಲಿ ಗರಿಷ್ಠ ರನ್ ಸಾಧನೆ. ನಿಜಕ್ಕೂ ಈಕೆ ಚಾಂಪಿಯನ್ ಆಟಗಾರ್ತಿ’ ಎಂದು ಕೊಹ್ಲಿ ಹೊಗಳಿ ಬರೆದಿದ್ದರು. ಇದರಲ್ಲಿ ನಗೆಪಾಟಲಿಗೀಡಾಗುವಂತದ್ದು ಏನಿದೆ ಅಂತ ಕೇಳಬಹುದು.

ಆದರೆ ಇಷ್ಟೆಲ್ಲಾ ಉದ್ದದ ಡೈಲಾಗ್ ಹೊಡೆದ ಕೊಹ್ಲಿ ಫೋಟೋ ಪ್ರಕಟಿಸುವಾಗ ಮಿಥಾಲಿ ಫೋಟೋ ಹಾಕುವ ಬದಲು ಇನ್ನೊಬ್ಬ ಆಟಗಾರ್ತಿ ಪೂನಂ ರಾವತ್ ಫೋಟೋ ಹಾಕಿದ್ದರು. ಇದನ್ನು ನೋಡಿ ಅಭಿಮಾನಿಗಳು ಕೊಹ್ಲಿಯನ್ನು ಹಿಗ್ಗಾ ಮುಗ್ಗಾ ಹಂಗಿಸಿದ್ದಾರೆ. ಹಾಗಿದ್ದರೂ ಕೊಹ್ಲಿ ಅದನ್ನು ಕಿತ್ತು ಹಾಕಿರಲಿಲ್ಲ. ಕೊನೆಗೆ ಕಿತ್ತು ಹಾಕುವಷ್ಟರಲ್ಲಿ ಅಭಿಮಾನಿಗಳು ಅವರ ಜನ್ಮ ಜಾಲಾಡಿಯಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ, ಯುವರಾಜ್ ಗೆ ನಿರ್ಗಮನದ ಬಾಗಿಲು ತೋರಿಸ್ತಾರಾ ರವಿಶಾಸ್ತ್ರಿ?!