Publish Date: Sun, 22 Jan 2017 (06:46 IST)
Updated Date: Sun, 22 Jan 2017 (06:48 IST)
ಕೋಲ್ಕೊತ್ತಾ: ಶನಿವಾರ ಟೀಂ ಇಂಡಿಯಾ ಈಡನ್ ಗಾರ್ಡನ್ ನಲ್ಲಿ ನೆಟ್ ಪ್ರಾಕ್ಟೀಸ್ ನಡೆಸಿತ್ತು. ಆದರೆ ಈ ಅಭ್ಯಾಸಕ್ಕೆ ನಾಯಕ ವಿರಾಟ್ ಕೊಹ್ಲಿಯನ್ನು ನೋಡಬೇಕೆಂದು ಬಂದ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು. ಅಂತಹ ಅಭಿಮಾನಿಗಳಿಗಾಗಿ ಕೊಹ್ಲಿ ವಿಶೇಷ ವಿಡಿಯೋ ಸಂದೇಶ ರವಾನಿಸಿದ್ದಾರೆ.
ಇದು ಕಡ್ಡಾಯ ಅಭ್ಯಾಸವಲ್ಲದಿದ್ದುದರಿಂದ ಕೊಹ್ಲಿ, ಯುವರಾಜ್ ಸೇರಿದಂತೆ ಪ್ರಮುಖರು ಕ್ರೀಡಾಂಗಣಕ್ಕೆ ಬಂದಿರಲಿಲ್ಲ. ಆದರೆ ತಮ್ಮ ನೆಚ್ಚಿನ ತಾರೆಯರನ್ನು ಕಂಡು ಅಟೋಗ್ರಾಫ್ ಪಡೆಯಬೇಕೆಂದು ಬಂದಿದ್ದವರಿಗೆ ತೀರಾ ನಿರಾಸೆಯಾಗಿತ್ತು.
ಈ ನಿರಾಸೆಯನ್ನು ಮರೆ ಮಾಚಲು ಕೊಹ್ಲಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಸಂದೇಶ ರವಾನಿಸಿದ್ದಾರೆ. “ನಮ್ಮನ್ನು ಸದಾ ಬೆಂಬಲಿಸುವ ನಿಮಗೆ ಧನ್ಯವಾದಗಳು. ನಿಮ್ಮ ಈ ಪ್ರೋತ್ಸಾಹವೇ ನಮಗೆ ಸ್ಪೂರ್ತಿ. ಸರಣಿ ಗೆದ್ದರೂ, ಈ ಪಂದ್ಯವನ್ನು ನಾವು ಹಗುರವಾಗಿ ಪರಿಗಣಿಸುತ್ತಿಲ್ಲ. ನೂರು ಪ್ರತಿಶತ ಪರಿಶ್ರಮ ಪಡುತ್ತೇವೆ” ಎಂದು ವಿಡಿಯೋ ಸಂದೇಶದಲ್ಲಿ ಕೊಹ್ಲಿ ಹೇಳಿಕೊಂಡಿದ್ದಾರೆ. ಇದನ್ನು ನೋಡಿಯಾದರೂ, ನಿರಾಸೆಯಾದ ಅಭಿಮಾನಿಗಳಿಗೆ ಸಮಾಧಾನವಾದೀತೇನೋ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ