ವಿರಾಟ್ ಕೊಹ್ಲಿಗೆ ಗೋಲ್ಡನ್ ಡಕ್ ನೀಡಿದ್ದಕ್ಕೆ ವಿಂಡೀಸ್ ನಾಯಕನ ಮೇಲೆ ಮುಯ್ಯಿ ತೀರಿಸಿಕೊಂಡ ಶಮಿ!

Webdunia
ಗುರುವಾರ, 19 ಡಿಸೆಂಬರ್ 2019 (09:38 IST)
ವಿಶಾಖಪಟ್ಟಣ: ವಿಶಾಖಪಟ್ಟಣದ ಮೈದಾನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಅದೃಷ್ಟದ ತಾಣ ಎಂದೇ ಪರಿಗಣಿಸಲಾಗುತ್ತದೆ. ಇಲ್ಲಿ ಕೊಹ್ಲಿ ಅತೀ ಹೆಚ್ಚು ರನ್ ಗಳಿಸಿದ್ದರು.


ಆದರೆ ನಿನ್ನೆಯ ಪಂದ್ಯದಲ್ಲಿ ಮಾತ್ರ ವಿಂಡೀಸ್ ಬೌಲರ್ ಗಳು ಕೊಹ್ಲಿಯ ಈ ಅದೃಷ್ಟಕ್ಕೆ ಕೊಳ್ಳಿ ಇಟ್ಟರು. ಕೆಎಲ್ ರಾಹುಲ್ ಔಟಾದ ಬಳಿಕ ಕ್ರೀಸ್ ಗೆ ಬಂದ ಕೊಹ್ಲಿ ರೋಹಿತ್ ಶರ್ಮಾ ಜತೆಗೆ ಹೊಡೆಬಡಿಯ ಇನಿಂಗ್ಸ್ ಆಡಿ ಭಾರತದ ಮೊತ್ತ ಉಬ್ಬಿಸುತ್ತಾರೆ ಎಂದೇ ಎಲ್ಲರ ನಿರೀಕ್ಷೆಯಾಗಿತ್ತು.

ಆದರೆ ಮೊದಲ ಎಸೆತದಲ್ಲಿಯೇ ವಿಂಡೀಸ್ ನಾಯಕ ಪೊಲ್ಲಾರ್ಡ್ ಎಸೆತದಲ್ಲಿ ಕ್ಯಾಚ್ ಔಟ್ ಆಗಿ ನಿರ್ಗಮಿಸಿದರು. ಕೊಹ್ಲಿಯ ಭರ್ಜರಿ ಇನಿಂಗ್ಸ್ ನೋಡುವ ಕಾತುರದಲ್ಲಿದ್ದ ಪ್ರೇಕ್ಷಕರಿಗೂ ತೀರಾ ನಿರಾಸೆಯಾಗಿತ್ತು. ವಿಶೇಷವೆಂದರೆ ಕೊಹ್ಲಿ ಔಟಾದ ರೀತಿಯಲ್ಲೇ ವಿಂಡೀಸ್ ನಾಯಕ ಪೊಲ್ಲಾರ್ಡ್ ಕೂಡಾ ಶೂನ್ಯ ಸಂಪಾದಿಸಿ ಶಮಿಗೆ ವಿಕೆಟ್ ಒಪ್ಪಿಸಿ ನಡೆದರು. ಇದು ಕಾಕತಾಳೀಯವಾದರೂ ಇಬ್ಬರೂ ನಾಯಕರೂ ಶೂನ್ಯ ಸಂಪಾದಿಸಿ ಸಮಬಲರಾದರು!

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪಲಾಶ್ ಜತೆಗಿನ ಮದುವೆ ರದ್ದು ಬಳಿಕ ಮೊದಲ ಬಾರಿ ಕಾಣಿಸಿಕೊಂಡ ಸ್ಮೃತಿ ಮಂಧಾನ

ವಿರಾಟ್ ಕೊಹ್ಲಿ ಒಂದು ವಿಜಯ್ ಹಜಾರೆ ಟ್ರೋಫಿ ಆಡಿದರೆ ಸಿಗುವ ಸಂಭಾವನೆ ಎಷ್ಟು ಗೊತ್ತಾ

ಶುಭಮನ್ ಗಿಲ್ ಗಾಗಿ ಸಂಜು ಸ್ಯಾಮ್ಸನ್ ಸೈಡ್ ಲೈನ್ ಮಾಡಿದ್ರಾ: ನೆಟ್ಟಿಗರ ತರಾಟೆ

ಬ್ರೇಕಪ್ ಆದ ಸ್ಮೃತಿ ಮಂಧಾನಗೆ ಇಂಥಾ ಕಾಮೆಂಟ್ ಮಾಡೋದಾ: ಇದೆಂಥಾ ಮನಸ್ಥಿತಿ

ಟೀಂ ಇಂಡಿಯಾ ಪರ ರೋಹಿತ್, ಕೊಹ್ಲಿ ಆಡುವ ಮುಂದಿನ ಪಂದ್ಯ ಯಾವುದು ನೋಡಿ

ಮುಂದಿನ ಸುದ್ದಿ
Show comments