Webdunia - Bharat's app for daily news and videos

Install App

ಐಪಿಎಲ್‌ನಲ್ಲಿ 1000 ರನ್ : ಇತಿಹಾಸ ನಿರ್ಮಾಣದ ಅಂಚಿನಲ್ಲಿ ವಿರಾಟ್ ಕೊಹ್ಲಿ

Webdunia
ಸೋಮವಾರ, 23 ಮೇ 2016 (19:50 IST)
ಐಪಿಎಲ್ ಸ್ಫೋಟಕ ಬ್ಯಾಟ್ಸ್‌ಮನ್, ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿಯನ್ನು ಯಾರಾದರೂ ತಡೆಯಲು ಸಾಧ್ಯವೇ? 919 ರನ್‌ಗಳು, 6 ಅರ್ಧಶತಕಗಳು ಮತ್ತು ನಾಲ್ಕು ಶತಕಗಳ ಬಳಿಕ 91.9 ಸರಾಸರಿಯೊಂದಿಗೆ ಮತ್ತು 152.4 ಸ್ಟ್ರೈಕ್ ರೇಟ್‌‍ನೊಂದಿಗೆ ವಿರಾಟ್ ಕೊಹ್ಲಿಯ ರನ್ ವೇಗವನ್ನು ತಡೆಯಲು ಸಾಧ್ಯವಿಲ್ಲ ಎನ್ನುವುದೇ ಇದಕ್ಕೆ ಉತ್ತರವಾಗಿದೆ.

ಆರ್‌ಸಿಬಿಗೆ ಹೆಚ್ಚು ಸಂತಸ ತಂದಿರುವ ವಿಷಯವೇನೆಂದರೆ, ಅವರು 2 ನೇ ಸ್ಥಾನಕ್ಕೆ ಜಿಗಿದಿರುವುದು. ಅವರಿಗೆ ಫೈನಲ್ ತಲುಪಲು 2 ಪಂದ್ಯಗಳು ಮಾತ್ರ ಬಾಕಿವುಳಿದಿದ್ದು, ಚಿನ್ನಸ್ವಾಮಿ ಸ್ಟೇಡಿಯಂ ಮೈದಾನದಲ್ಲಿ ಅವುಗಳನ್ನು ಆಡುವುದು ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಲಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಅವರು ಗುಜರಾತ್ ಲಯನ್ಸ್ ತಂಡವನ್ನು ಎದುರಿಸಲಿದ್ದು,  ಅದನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಾಗುತ್ತದೆ. ಕಳೆದ ಬಾರಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ 248ಕ್ಕೆ 3 ವಿಕೆಟ್ ಗಳಿಸಿದ್ದು, ಈ ಆವೃತ್ತಿಯಲ್ಲೇ ಅತ್ಯಧಿಕ ಸ್ಕೋರಾಗಿದೆ.
 
ಟ್ವೆಂಟಿ 20 ಇತಿಹಾಸದಲ್ಲಿ ಪಂದ್ಯಾವಳಿಯ ಒಂದು ಆವೃತ್ತಿಯಲ್ಲಿ 1000 ರನ್ ಸ್ಕೋರ್ ಮಾಡಿದ ಪ್ರಥಮ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಕೊಹ್ಲಿಗೆ ಕೇವಲ 81 ರನ್‌ಗಳು ಮಾತ್ರ ಬಾಕಿವುಳಿದಿದೆ.  ಎಲ್ಲಾ ಟ್ವೆಂಟಿ 20 ಲೀಗ್‌ಗಳಲ್ಲಿ ಅತ್ಯಧಿಕ ಸ್ಕೋರು 2012 ಮತ್ತು 2013ರ ಸೀಸನ್‌ನಲ್ಲಿ ಕ್ರಮವಾಗಿ ಕ್ರಿಸ್ ಗೇಲ್ ಮತ್ತು ಮೈಕೇಲ್ ಹಸ್ಸಿ ಅವರ 733 ರನ್‌ಗಳಾಗಿವೆ. ಆರ್‌ಸಿಬಿ ಇನ್ನೆರಡು ಪಂದ್ಯಗಳನ್ನು ಆಡುವುದು ನಿಶ್ಚಿತವಾದ್ದರಿಂದ ಕೊಹ್ಲಿ 2016ರ ಸೀಸನ್‌ನಲ್ಲಿ  1000 ರನ್ ಮಾಡಿ ಇತಿಹಾಸ ನಿರ್ಮಿಸುವ ಮಾರ್ಗದಲ್ಲಿದ್ದಾರೆ. 
 
 ಡೆಲ್ಲಿ ಡೇರ್‌ ಡೆವಿಲ್ಸ್ ವಿರುದ್ಧ ಪಂದ್ಯದ ಸಂದರ್ಭದಲ್ಲಿ, ಕೊಹ್ಲಿ 2016ರ ತಮ್ಮ ದಾಖಲೆಗಳ ಗುಂಪಿಗೆ 17 ನೇ 50+ ಸ್ಕೋರ್ ಮಾಡುವ ಮೂಲಕ ಇನ್ನೊಂದು ದಾಖಲೆ ಸೇರಿದ್ದಾರೆ. ಕ್ರಿಸ್ ಗೇಲ್ 2012ರಲ್ಲಿ 16 50+ ಸ್ಕೋರ್ ಮಾಡಿದ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.
 
 ರಾಯಲ್ ಚಾಲೆಂಜರ್ಸ್ ಎರಡನೇ ಸ್ಥಾನದಲ್ಲಿ ಉಳಿದಿರುವುದರಿಂದ ಮೊದಲ ಐಪಿಎಲ್ ಆವೃತ್ತಿಯನ್ನು ಗೆದ್ದುಕೊಳ್ಳುವ ಅವಕಾಶವೂ ಹೆಚ್ಚಿದೆ.  2012ರ ಆವೃತ್ತಿಯಲ್ಲಿ ಹೊಸ ಪ್ಲೇ ಆಫ್ ಸ್ವರೂಪದ ಆಟವನ್ನು ಪರಿಚಯಿಸಿದ ಮೇಲೆ ಎರಡನೇ ಸ್ಥಾನದಲ್ಲಿ ಮುಕ್ತಾಯ ಕಂಡ ತಂಡಗಳೇ ಐಪಿಎಲ್‌ ಪ್ರಶಸ್ತಿಗಳನ್ನು ಗೆದ್ದುಕೊಂಡಿವೆ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಸೂಪರ್‌ ಕಿಂಗ್ಸ್ ಗಾಯಕ್ಕೆ ಉಪ್ಪು ಸವರಿದ ಕಿಂಗ್ಸ್‌: ಟೂರ್ನಿಯಿಂದ ಧೋನಿ ಪಡೆ ಔಟ್‌

IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ತವರಿನಲ್ಲಿ ಮತ್ತೆ ಮುಖಭಂಗ: ಕೋಲ್ಕತ್ತ ತಂಡಕ್ಕೆ ರೋಚಕ ಜಯ

Vaibhav SuryaVamshi:ಶತಕ ಸಿಡಿಸಿದ ವೈಭವ್ ಸೂರ್ಯವಂಶಿಗೆ ಬಿಹಾರ ಸರ್ಕಾರದಿಂದ ಬಹುಮಾನ ಘೋಷಣೆ

ಐಪಿಎಲ್‌ಗಾಗಿ ತನ್ನ ನೆಚ್ಚಿನ ಮಾಂಸಾಹಾರ, ಜಂಕ್‌ಫುಟ್‌ಗೆ ಗುಡ್‌ಬೈ ಹೇಳಿದ್ದ ವೈಭವ್‌ ಸೂರ್ಯವಂಶಿ

Virat Kohli video: ಸದ್ಯ ನೀವು ಔಟಾಗಿದ್ದೇ ಒಳ್ಳೇದಾಯ್ತು.. ಕಾಂತಾರ ಸೆಲೆಬ್ರೇಷನ್ ಮಾಡಿದ್ದ ಕೊಹ್ಲಿಗೆ ಕೆಎಲ್ ರಾಹುಲ್ ಹೇಳಿದ್ದೇನು ಬಹಿರಂಗ

ಮುಂದಿನ ಸುದ್ದಿ
Show comments