Webdunia - Bharat's app for daily news and videos

Install App

ರಾಯಲ್ ಚಾಲೆಂಜರ್ಸ್ ಸ್ಪಿನ್ನರುಗಳಿಂದ ಒತ್ತಡ: ಕ್ವಿಂಟನ್ ಡಿ ಕಾಕ್

Webdunia
ಸೋಮವಾರ, 23 ಮೇ 2016 (19:12 IST)
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ವಿರುದ್ಧ 6 ವಿಕೆಟ್ ಸೋಲಿನ ಬಳಿಕ ಡೆಲ್ಲಿ ಡೇರ್ ಡೆವಿಲ್ಸ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಎದುರಾಳಿ ತಂಡವು ತಮ್ಮನ್ನು 138 ರನ್ ಸಾಧಾರಣ ಮೊತ್ತಕ್ಕೆ ನಿರ್ಬಂಧಿಸಿದ ಆಟದ ಯೋಜನೆಯನ್ನು ಶ್ಲಾಘಿಸಿದರು ಮತ್ತು ವಿಶೇಷವಾಗಿ ಸ್ಪಿನ್ನರುಗಳು ತುಂಬಾ ಒತ್ತಡವನ್ನು ಹಾಕಿದರು ಮತ್ತು ಅವರ ಬೌಲಿಂಗ್ ಬದಲಾವಣೆ ಕೂಡ ಉತ್ತಮವಾಗಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.

ಆದರೆ ನಾವು ಮೇಲಿಂದ ಮೇಲೆ ವಿಕೆಟ್ ಕಳೆದುಕೊಳ್ಳುತ್ತಿದ್ದರಿಂದ ಜತೆಯಾಟವನ್ನು ನಿರ್ಮಿಸುವುದು ಕಷ್ಟವಾಯಿತು ಎಂದು 23 ವರ್ಷದ ದಕ್ಷಿಣ ಆಫ್ರಿಕಾ ಕ್ರಿಕೆಟರ್ ಕಳೆದ ರಾತ್ರಿ ಪಂದ್ಯ ನಂತರದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಸೋಲಿಗೆ ಕಾರಣವನ್ನು ವಿಶ್ಲೇಷಿಸಿದರು.  ಡಿ ಕಾಕ್ ಆರ್‌ಸಿಬಿ ವಿರುದ್ಧ 52 ಎಸೆತಗಳಿಗೆ 60 ರನ್ ಸ್ಕೋರ್ ಮಾಡಿದರೂ 6 ವಿಕೆಟ್‌ಗಳಿಂದ ಪಂದ್ಯವನ್ನು ಸೋತರು.
 
 ನಾವು ಇನ್ನೂ 20 ರನ್ ಹೆಚ್ಚು ಗಳಿಸಿದ್ದರೆ, ನಾವು 160 ರನ್ ಗಳಿಸುತ್ತಿದ್ದೆವು. ಆದರೆ ಡೆತ್ ಓವರುಗಳಲ್ಲಿ ಅವರು ಚೆನ್ನಾಗಿ ಬೌಲ್ ಮಾಡಿದ್ದರಿಂದ ನಾವು ಸೋಲಪ್ಪಿದೆವು ಎಂದು ಅವರು ಪ್ರತಿಪಾದಿಸಿದರು.  ಡಿ ಕಾಕ್ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಯನ್ನು ಕೂಡ ಶ್ಲಾಘಿಸಿದರು. ಅವರು 45 ಎಸೆತಗಳಲ್ಲಿ 54 ಅಜೇಯ ರನ್ ಬಾರಿಸಿದರು. 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಅಪರೂಪದ ದಾಖಲೆ ಮಾಡಿದ ಶುಭಮನ್ ಗಿಲ್

ಆಂಗ್ಲರ ನಾಡಲ್ಲಿ ಮತ್ತೇ ಅಬ್ಬರಿಸಿದ ಶುಭ್ಮನ್‌ ಗಿಲ್ ಬ್ಯಾಟಿಂಗ್‌: 8ನೇ ಶತಕ ಸಿಡಿಸಿದ ಕ್ಯಾಪ್ಟನ್‌

IND vs ENG Test: ವಿದೇಶಿ ನೆಲದಲ್ಲಿ ಹೊಸ ದಾಖಲೆ ಬರೆದ ರಿಷಭ್ ಪಂತ್

IND vs ENG: ಕರುಣ್ ನಾಯರ್ ನಿಮಗೆ ಎರಡನೇ ಚಾನ್ಸ್ ಸಿಕ್ತು, ನೀವು ಮಾಡಿದ್ದೇನು

IND vs ENG: ವೈಸ್ ಕ್ಯಾಪ್ಟನ್ಸಿ ಪಟ್ಟ ರಿಷಭ್ ಪಂತ್ ಗೆ ಕೆಲಸ ಮಾಡಲು ಕೆಎಲ್ ರಾಹುಲ್

ಮುಂದಿನ ಸುದ್ದಿ
Show comments