Select Your Language

Notifications

webdunia
webdunia
webdunia
webdunia

ಅನಿಲ್ ಕುಂಬ್ಳೆ ಜತೆ ‘ಅಡ್ಜಸ್ಟ್’ ಮಾಡಿಕೊಳ್ಳಲು ಕೊಹ್ಲಿಗೆ ಸಲಹೆ

ಅನಿಲ್ ಕುಂಬ್ಳೆ ಜತೆ ‘ಅಡ್ಜಸ್ಟ್’ ಮಾಡಿಕೊಳ್ಳಲು ಕೊಹ್ಲಿಗೆ ಸಲಹೆ
Mumbai , ಶನಿವಾರ, 10 ಜೂನ್ 2017 (08:36 IST)
ಮುಂಬೈ: ಅನಿಲ್ ಕುಂಬ್ಳೆ ಜತೆ ಏನೇ ಭಿನ್ನಾಭಿಪ್ರಾಯಗಳಿದ್ದರೂ, ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಕ್ರಿಕೆಟ್ ಸಲಹಾ ಸಮಿತಿ ಮನವಿ ಮಾಡಿದೆ.

 
ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾದ ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಮತ್ತು ಸಚಿನ್ ತೆಂಡುಲ್ಕರ್ ಗೆ ಸದ್ಯಕ್ಕೆ ಕುಂಬ್ಳೆಯನ್ನು ಕಿತ್ತೊಗೆಯುವುದು ಕಷ್ಟ. ಹಾಗಾಗಿ ಕನಿಷ್ಠ ವೆಸ್ಟ್ ಇಂಡೀಸ್ ಪ್ರವಾಸದವರೆಗಾದರೂ, ಕುಂಬ್ಳೆ ಜತೆಗೆ ಹೊಂದಿಕೊಳ್ಳಲು ಸೂಚಿಸಿದೆ ಎನ್ನಲಾಗಿದೆ.

ಕಳೆದ ರಾತ್ರಿ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಜತೆ ತಡ ರಾತ್ರಿವರೆಗೆ ಚರ್ಚಿಸಿದ ಸಲಹಾ ಸಮಿತಿ ಸದಸ್ಯರು ತಮ್ಮ ಈ ನಿರ್ಧಾರವನ್ನು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಅಲ್ಲದೆ ಸಲಹಾ ಸಮಿತಿ ಸದಸ್ಯರು ಕುಂಬ್ಳೆ ಮತ್ತು ಕೊಹ್ಲಿ ಜತೆಗೆ ಪ್ರತ್ಯೇಕವಾಗಿ ಚರ್ಚಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮಧ್ಯದಲ್ಲೇ ಕುಂಬ್ಳೆಯನ್ನು ಕಿತ್ತೊಗೆಯುವುದು ಸೂಕ್ತವಲ್ಲ. ಅಲ್ಲದೆ, ಇದು ತಂಡದ ಪ್ರದರ್ಶನದ ಮೇಲೂ ಪರಿಣಾಮ ಬೀರಬಹುದು ಎಂಬುದು ಬಿಸಿಸಿಐ ಹಿರಿಯ ಅಧಿಕಾರಿಗಳ ಆತಂಕವಾಗಿದೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲಂಕಾ ವಿರುದ್ಧ ಸೋಲಿಗೆ ಕೊಹ್ಲಿ ಪ್ರತಿಕ್ರಿಯೆ