ನವದೆಹಲಿ: ಈ ವರ್ಷಾರಂಭದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವೆ ಸಂಬಂಧದಲ್ಲಿ ಬಿರುಕು ಬಿಟ್ಟ ಬಳಿಕ, ಈಗ ಸರಿಯಾದ ದಿಕ್ಕಿಗೆ ಹಿಂತಿರುಗಿದ್ದಾರೆ. ಜೂನ್ 3ರಂದು ಸುಲ್ತಾನ್ ಶೆಡ್ಯೂಲ್‌ನಲ್ಲಿ ಭಾಗವಹಿಸಲು ಅನುಷ್ಕಾ ಬುಡಾಪೆಸ್ಟ್‌ಗೆ ತೆರಳಿದ್ದಾಗ ವಿರಾಟ್ ಅವಳನ್ನು ಡ್ರಾಪ್ ಮಾಡಲು ಮುಂಬೈ ಏರ್‌ಪೋರ್ಟ್‌ಗೆ ಆಗಮಿಸಿದ್ದರು. ಇಬ್ಬರು ಕಾರಿನಲ್ಲಿ ಕುಳಿತುಕೊಂಡು ಕೆಲವು ಕಾಲ ಮಾತನಾಡಿ ಅನುಷ್ಕಾ ಫ್ಲೈಟ್ ಏರಲು ನಿರ್ಗಮಿಸುವ ಮುಂಚೆ ಆಲಂಗಿಸಿಕೊಂಡರು.
ವರದಿಯೊಂದರ ಪ್ರಕಾರ ಬುಡಾಫೆಸ್ಟ್ ಶೆಡ್ಯೂಲ್ ಬಳಿಕ ಅನುಷ್ಕಾ ನೇರವಾಗಿ ನವದೆಹಲಿಗೆ ಆಗಮಿಸಿ ವಿರಾಟ್ ತಂದೆ, ತಾಯಿಗಳನ್ನು ಮತ್ತು ಕುಟುಂಬದವರನ್ನು ಭೇಟಿ ಮಾಡಿದರು. ಅದಾದ ಬಳಿಕ ರಜಾ ಮೋಜು ಅನುಭವಿಸಲು ಜೋಡಿ ಎಲ್ಲಿಗೋ ತೆರಳಿದ್ದರು.
ಅಲ್ಲಿಂದ ಈ ಜೋಡಿ ಚಂದೀಗಢಕ್ಕೆ ಬರಲಿದ್ದು, ಅನುಷ್ಕಾ ಮುಂದಿನ ಚಿತ್ರ ಫಿಲ್ಲೌರಿಯಲ್ಲಿ ಪಾತ್ರವಹಿಸಲಿದ್ದಾರೆ. ಕೊಹ್ಲಿಯ ಬಹುತೇಕ ಸಹಆಟಗಾರರು ಈಗಾಗಲೇ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ನಡುವೆ ಕೊಹ್ಲಿ ಕೂಡ ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿ ಕೊಡುತ್ತಾರಾ ಎಂದು ಕಾದುನೋಡಬೇಕಾಗಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ