ವಿರಾಟ್ ಜತೆಗೆ ಅನುಷ್ಕಾ ಫೋಟೋ ಎಡಿಟ್ ಮಾಡಿದ ಅಭಿಮಾನಿಯ ಕರಾಮತ್ತಿಗೆ ನಕ್ಕು ಸುಸ್ತಾದ ನೆಟ್ಟಿಗರು

ಸೋಮವಾರ, 9 ಸೆಪ್ಟಂಬರ್ 2019 (10:25 IST)
ಮುಂಬೈ: ವಿರಾಟ್ ಕೊಹ್ಲಿ ಆಗಾಗ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಫೋಟೋ ಪ್ರಕಟಿಸುತ್ತಲೇ ಇರುತ್ತಾರೆ. ಅಂತಹದ್ದೇ ಒಂದು ಬೀಚ್ ಸೈಡ್ ಫೋಟೋವನ್ನು ವಿರಾಟ್ ಮೊನ್ನೆಯಷ್ಟೇ ತಮ್ಮ ಪೇಜ್ ನಲ್ಲಿ ಪ್ರಕಟಿಸಿದ್ದರು.


ಆದರೆ ಇದರಲ್ಲಿ ವಿರಾಟ್ ಮಾತ್ರ ಇದ್ದಿದ್ದು ನೋಡಿ ಅಭಿಮಾನಿಯೊಬ್ಬ ತಮ್ಮ ಕರಾಮತ್ತು ತೋರಿಸಿ ವಿರಾಟ್ ಪತ್ನಿ ಅನುಷ್ಕಾರ ಫೋಟೋವನ್ನೂ ಎಡಿಟ್ ಮಾಡಿ ಸೇರಿಸಿದ್ದ. ಇದನ್ನು ನೋಡಿದ ನೆಟ್ಟಿಗರು ನಕ್ಕೂ ನಕ್ಕೂ ಸುಸ್ತಾಗಿದ್ದಾರೆ.

ವಿರಾಟ್ ಬೀಚ್ ಕಡೆಗೆ ನೋಡುತ್ತಿರುವ ಫೋಟೋಗೆ ಬೀಚ್ ಮಧ್ಯದಿಂದ ಅನುಷ್ಕಾ ತುಂಡುಡುಗೆಯಲ್ಲಿರುವ ಫೋಟೋ ಸೇರಿಸಿ ಅಭಿಮಾನಿ ಟ್ವಿಟರ್ವ ನಲ್ಲಿ ಪ್ರಕಟಿಸಿದ್ದಾನೆ. ಇದನ್ನೂ ನೋಡಿ, ಅಯ್ಯೋ  ಪಾಪ.. ಈ ಅಭಿಮಾನಿಗೆ ಅನುಷ್ಕಾ ಇಲ್ಲದೇ ವಿರಾಟ್ ರನ್ನು ನೋಡಲೂ ಆಗುತ್ತಿಲ್ಲ ಎನಿಸುತ್ತದೆ ಎಂದು ತಮಾಷೆ ಮಾಡಿದ್ದಾರೆ. ಈ ಫೋಟೋಗೆ ಸಾವಿರಾರು ಲೈಕ್ಸ್, ಕಾಮೆಂಟ್ಸ್ ಬಂದಿವೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಸಿಸಿಐ ಮುಂದೆ ಕ್ಷಮೆಯಾಚಿಸಿದ ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್