ನೀವೇ ನಮ್ಮ ನಿಜವಾದ ಹೀರೋ ಎಂದು ವಿರಾಟ್ ಕೊಹ್ಲಿ ಸೆಲ್ಯೂಟ್ ಮಾಡಿದ್ದು ಯಾರಿಗೆ ಗೊತ್ತಾ?

Webdunia
ಶನಿವಾರ, 2 ಮಾರ್ಚ್ 2019 (10:18 IST)
ಹೈದರಾಬಾದ್: ಪಾಕಿಸ್ತಾನದಿಂದ ನಿನ್ನೆ ರಾತ್ರಿ ಬಿಡುಗಡೆಯಾಗಿ ತವರಿಗೆ ಮರಳಿದ ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಜೈನ್ ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕ್ರೀಡಾ ಲೋಕ ಅಭಿನಂದನೆ ಸಲ್ಲಿಸಿದೆ.


ಅಭಿನಂದನ್ ಫೋಟೋ ಜತೆಗೆ, ನೀವೇ ನಮ್ಮ ನಿಜವಾದ ಹೀರೋ. ನಿಮಗೆ ನಮ್ಮ ಗೌರವ ನಮಸ್ಕಾರ. ಜೈ ಹಿಂದ್ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಇನ್ನು, ಅಭಿನಂದನ್ ಬಗ್ಗೆ ಟ್ವೀಟ್ ಮಾಡಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ‘ನೀವು ಬರೀ ನಾಲ್ಕು ಪದಗಳ ಹೀರೋ ಅಲ್ಲ. ಅವರ ಧೈರ್ಯ, ನಿಸ್ವಾರ್ಥತೆ ಮೂಲಕ ನಾವು ಹೇಗೆ ನಮ್ಮ ಬಗ್ಗೆ ವಿಶ್ವಾಸವಿಡಬೇಕೆಂದು ತೋರಿಸಿಕೊಟ್ಟಿದ್ದಾರೆ’ ಎಂದು ಹೊಗಳಿದ್ದಾರೆ.

ಇವರಲ್ಲದೆ, ಕ್ರಿಕೆಟಿಗರಾದ ಸೆಹ್ವಾಗ್, ರೋಹಿತ್ ಶರ್ಮಾ, ಯುವರಾಜ್ ಸಿಂಗ್ ಸೇರಿದಂತೆ ಅನೇಕ ಕ್ರೀಡಾ ಲೋಕದ ತಾರೆಯರು ಅಭಿನಂದನ್ ತಾಯ್ನಾಡಿಗೆ ಮರಳಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೊಹಮ್ಮದ್ ಶಮಿಗೆ ಸುಪ್ರೀಂ ನೋಟಿಸ್: ವೃತ್ತಿ ಜೀವನದ ಬಳಿಕ ವೈಯಕ್ತಿಕ ಜೀವನದಲ್ಲೂ ಸಂಕಷ್ಟ

ಏನಾದ್ರೂ ಆಗಲಿ ಅಹಮ್ಮದಾಬಾದ್ ನಲ್ಲಿ ಮಾತ್ರ ಟಿ20 ವಿಶ್ವಕಪ್ ಫೈನಲ್ ಬೇಡ ಅಂತಿದ್ದಾರೆ ಫ್ಯಾನ್ಸ್

Betting Case: ಸುರೇಶ್ ರೈನಾ, ಶಿಖರ್ ಧವನ್ ಮುಟ್ಟುಗೋಲಾದ ಆಸ್ತಿಯೆಷ್ಟು ಗೊತ್ತಾ

ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ಟೀಂ ಇಂಡಿಯಾಗೆ ಸರಣಿ ಮುನ್ನಡೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿ ಗಿಫ್ಟ್ ಕೊಟ್ಟ ಮಹಿಳಾ ಕ್ರಿಕೆಟಿಗರು video

ಮುಂದಿನ ಸುದ್ದಿ
Show comments