Publish Date: Mon, 30 Jan 2017 (09:40 IST)
Updated Date: Mon, 30 Jan 2017 (09:42 IST)
ನಾಗ್ಪುರ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೂ ನಮ್ಮ ಬೆಂಗಳೂರಿಗೂ ಭಾರೀ ನಂಟು. ಕೊಹ್ಲಿ ಐಪಿಎಲ್ ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪರವಾಗಿ ಆಡುತ್ತಾರೆ. ಅವರ ಗೆಳತಿ ಅನುಷ್ಕಾ ಶರ್ಮಾ ಕೂಡಾ ಮೂಲತಃ ಬೆಂಗಳೂರಿನವರೇ.
ಹೀಗಾಗಿಯೇ ಕೊಹ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವಾಗ ಬೌಂಡರಿ ಗೆರೆಯ ಬಳಿ ನಿಂತಿದ್ದರೆ ಸಾಕು, ಅಭಿಮಾನಿಗಳು ಅವರ ಹೆಸರನ್ನು ಕೂಗಿ ಹುಚ್ಚೆದ್ದು ಕುಣಿಯುತ್ತಿರುತ್ತಾರೆ. ಇಂತಿಪ್ಪ ಕೊಹ್ಲಿ ಬೆಂಗಳೂರಿನ ಬಗ್ಗೆ ನಾಗ್ಪುರ ಟಿ-ಟ್ವೆಂಟಿ ಪಂದ್ಯ ಮುಗಿದ ಬಳಿಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.
“ಬೆಂಗಳೂರು ನನ್ನ ಎರಡನೇ ಮನೆ ಇದ್ದಂತೆ. ಅಲ್ಲಿ ಆಡುವುದನ್ನು ಎದುರು ನೋಡುತ್ತಿದ್ದೇನೆ. ಅದಕ್ಕಾಗಿ ಇನ್ನು ಹೆಚ್ಚು ಕಾಯಲಾಗದು. ಅಲ್ಲಿ ಇದಕ್ಕಿಂತ ಉತ್ತಮವಾಗಿ ಆಡಲು ಪ್ರಯತ್ನಿಸುತ್ತೇವೆ” ಎಂದು ಪಂದ್ಯದ ನಂತರ ಕೊಹ್ಲಿ ಹೇಳಿಕೊಂಡಿದ್ದಾರೆ. ಹೀಗಿರುವಾಗ ತಮ್ಮ ಎರಡನೇ ತವರಿನ ಅಭಿಮಾನಿಗಳ ಎದುರು ಕೊಹ್ಲಿ ಸಿಡಿಯುತ್ತಾರಾ? ಬುಧವಾರದವರೆಗೆ ಕಾಯಲೇ ಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ