Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಒಂದೇ ದಿನದಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿ ಸಂಗ್ರಹಿಸಿದ ದೇಣಿಗೆಯೆಷ್ಟು ಗೊತ್ತಾ?

webdunia
ಭಾನುವಾರ, 9 ಮೇ 2021 (09:11 IST)
ಮುಂಬೈ: ಕೊರೋನಾ ಸಂತ್ರಸ್ತರಿಗೆ ಸಹಾಯ ಮಾಡುವ ಉದ್ದೇಶದಿಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಫೌಂಡೇಷನ್ ಒಂದನ್ನು ಸ್ಥಾಪಿಸಿ ದೇಣಿಗೆ ಸಂಗ್ರಹದಲ್ಲಿ ತೊಡಗಿದ್ದಾರೆ.


ಈ ರೀತಿಯಾಗಿ ಸಂಗ್ರಹವಾದ ದೇಣಿಗೆಯನ್ನು ಅವರು ಮುಂಬೈ ಸೇರಿದಂತೆ, ದೇಶದ ವಿವಿದೆಡೆ ಕೊರೋನಾ ಸಂತ್ರಸ್ತರಿಗೆ ನೆರವಾಗಲು ಬಳಸಲಿದ್ದಾರೆ.

ಇದೀಗ ದೇಣಿಗೆ ಸಂಗ್ರಹಕ್ಕೆ ತೊಡಗಿ ಒಂದೇ ದಿನದಲ್ಲಿ ಬರೋಬ್ಬರಿ 3.6 ಕೋಟಿ ರೂ. ಸಂಗ್ರಹವಾಗಿದೆ. ಈ ವಿಚಾರವನ್ನು ಇಬ್ಬರೂ ಬಹಿರಂಗಪಡಿಸಿದ್ದಾರೆ. ಜನರಿಗೆ ತಾವೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ತಾರಾ ದಂಪತಿ ಕರೆ ನೀಡಿದ್ದರು. ಅಲ್ಲದೆ ತಾವೂ ಕೊರೋನಾ ಪರಿಹಾರಕ್ಕೆ 2 ಕೋಟಿ ರೂ. ದೇಣಿಗೆ ನೀಡಿದ್ದರು.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಹಾರ್ದಿಕ್ ಪಾಂಡ್ಯರನ್ನು ಆಯ್ಕೆಗಾರರು ಕಡೆಗಣಿಸಲು ಇದುವೇ ಕಾರಣ?