Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಕೋಚ್ ರೇಸ್ ಗೆ ಕನ್ನಡಿಗ ವೆಂಕಟೇಶ್ ಪ್ರಸಾದ್ ಸೇರ್ಪಡೆ

ವೆಂಕಟೇಶ್ ಪ್ರಸಾದ್
Mumbai , ಗುರುವಾರ, 29 ಜೂನ್ 2017 (09:42 IST)
ಮುಂಬೈ: ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಹಾಕುವವರ ಪಟ್ಟಿ ಬೆಳೆಯುತ್ತಲೇ ಸಾಗುತ್ತಿದೆ. ಹೊಸದಾಗಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಅರ್ಜಿ ಹಾಕಿದ್ದಾರೆಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

 
33 ಟೆಸ್ಟ್ ಪಂದ್ಯಗಳು ಮತ್ತು 161 ಏಕದಿನ ಪಂದ್ಯಗಳನ್ನಾಡಿರುವ ಪ್ರಸಾದ್ ಒಂದೊಮ್ಮೆ ಭಾರತ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಪ್ರಸಾದ್, ರವಿ ಶಾಸ್ತ್ರಿಯೊಂದಿಗೆ ಹೊಸದಾಗಿ ಅರ್ಜಿ ಹಾಕಿದ ಪ್ರಮುಖರಾಗಿದ್ದಾರೆ.

ಈಗಾಗಲೇ ವೀರೇಂದ್ರ ಸೆಹ್ವಾಗ್,  ಟಾಮ್ ಮೂಡಿ ಕೋಚ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಅವರೊಂದಿಗೆ ಈ ಎರಡು ಹೆಸರೂ ಸೇರ್ಪಡೆಯಾಗಿದೆ. ಹಾಗಿದ್ದರೂ ವಿರಾಟ್ ಕೊಹ್ಲಿ ಬೆಂಬಲಿತ ರವಿ ಶಾಸ್ತ್ರಿ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಗೆ ‘ಮನಮೋಹನ್ ಸಿಂಗ್’ ಕೋಚ್ ಬೇಡ ಎಂದ ಅಭಿಮಾನಿಗಳು!