Select Your Language

Notifications

webdunia
webdunia
webdunia
webdunia

ಆಸೀಸ್ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಬ್ಯಾಟ್ ಮುರಿದ ವೇಗಿ ಉಮೇಶ್ ಯಾದವ್!

ಆಸೀಸ್ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಬ್ಯಾಟ್ ಮುರಿದ ವೇಗಿ ಉಮೇಶ್ ಯಾದವ್!
Ranchi , ಶುಕ್ರವಾರ, 17 ಮಾರ್ಚ್ 2017 (11:06 IST)
ರಾಂಚಿ: ವೇಗಿಗಳು ಬಾಲ್ ಎಸೆದ ವೇಗಕ್ಕೆ ವಿಕೆಟ್ ಮುರಿದು ಬೀಳುವುದು ನೋಡಿದ್ದೇವೆ. ಇದೀಗ ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಎದುರಾಳಿಯ ಬ್ಯಾಟ್ ನ್ನೇ ಮುರಿದು ಹಾಕಿದ್ದಾರೆ!

 
ರಾಂಚಿಯಲ್ಲಿ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದ ದ್ವಿತೀಯ ದಿನ ಮೊದಲ ಎಸೆತದಲ್ಲೇ ಉಮೇಶ್ ಯಾದವ್ ಆಸೀಸ್ ನ ಗ್ಲೆನ್ ಮ್ಯಾಕ್ಸ್ ವೆಲ್ ಬ್ಯಾಟ್ ಮುರಿದಿದ್ದಾರೆ. 137 ಕಿ.ಮೀ. ವೇಗದಲ್ಲಿ ಎಸೆದ ಬಾಲ್ ಮ್ಯಾಕ್ಸ್ ವೆಲ್ ಬ್ಯಾಟಿಗೆ ಬಡಿದ ರಭಸಕ್ಕೆ ಬ್ಯಾಟ್ ಎರಡು ತುಂಡಾಗಿ ಬಿದ್ದಿದೆ.

ತಕ್ಷಣ ಮ್ಯಾಕ್ಸ್ ವೆಲ್ ಕಡೆಗೆ ತನ್ನ ಮಾಂಸಖಂಡ ತೋರಿ ನಗೆ ಬೀರಿದ ಉಮೇಶ್ ಯಾದವ್, ನನ್ನ ತಾಕತ್ತು ನೋಡಿ ಎಂದು ತಮಾಷೆ ಮಾಡಿದ್ದಾರೆ. ಮ್ಯಾಕ್ಸ್ ವೆಲ್ ಕೂಡಾ ನಗುತ್ತಲೇ ಪ್ರತಿಕ್ರಿಯಿಸಿದ್ದು, ಇನ್ನೊಂದು ಬ್ಯಾಟ್ ಪಡೆದು ಬ್ಯಾಟಿಂಗ್ ಮುಂದುವರಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ತಂಗಿದ್ದ ಹೋಟೆಲ್ ಗೆ ಬೆಂಕಿ!