ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ಅನಿಲ್ ಕುಂಬ್ಳೆ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಇದೀಗ ಕೇಳಿಬರುತ್ತಿದೆ. ಆದರೆ ಇವರಿಬ್ಬರ ನಡುವಿನ ವೈಮನಸ್ಯಕ್ಕೆ ಕಾರಣವೇನೆಂದು ಆಂಗ್ಲ ಪತ್ರಿಕೆಯೊಂದು ವಿಶ್ಲೇಸಿದೆ.
ಆ ಪ್ರಕಾರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ಕೊಹ್ಲಿ ಅನುಪಸ್ಥಿತಿಯಲ್ಲಿ ಕುಂಬ್ಳೆ ಕುಲದೀಪ್ ಯಾದವ್ ರನ್ನು ಆಡಿಸುವ ನಿರ್ಧಾರ ಕೈಗೊಂಡಿದ್ದರು. ಆದರೆ ಈ ವಿಚಾರ ಕೊಹ್ಲಿಗೆ ಕಡೆ ಗಳಿಗೆಯಲ್ಲಿ ಗೊತ್ತಾಯಿತು.
ಈ ರೀತಿ ತಂಡದ ನಿರ್ಧಾರವನ್ನು ತನ್ನ ಬಳಿ ಚರ್ಚಿಸದೇ ಇರುವುದು ಕೊಹ್ಲಿ ಸಿಟ್ಟಿಗೆ ಕಾರಣವಾಯ್ತು. ಅದೇ ಕಾರಣಕ್ಕೆ ಬಿರುಕು ಆರಂಭವಾಗಿರಲೂಬಹುದು ಎಂದು ಪತ್ರಿಕೆ ವಿಶ್ಲೇಸಿದೆ. ಆದರೆ ಇದುವೇ ನಿಜವಾಗಿರಬೇಕೆಂದೇನಿಲ್ಲ.
ಆದರೆ ಒಟ್ಟಾರೆಯಾಗಿ ಕುಂಬ್ಳೆ ಧೋರಣೆ ಕೊಹ್ಲಿಗೆ ಇಷ್ಟವಾಗುತ್ತಿಲ್ಲ ಎಂಬ ಸುದ್ದಿಗಳು ಟೀಂ ಇಂಡಿಯಾ ಮೂಲಗಳಿಂದ ಹರಿದು ಬರುತ್ತಿವೆ. ಏನೇ ಆದರೂ ಭಾರತ ಕಂಡ ದಿಗ್ಗಜ ಸ್ಪಿನ್ನರ್ ಗೆ ಇಂತಹದ್ದೊಂದು ಅಪವಾದಗಳು ಬೇಡವಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ