ಮುಂಬೈ: ಸಚಿನ್ ತೆಂಡುಲ್ಕರ್ ಜೀವನಾಧಾರಿತ ಸಿನಿಮಾ ಸಚಿನ್ ದಿ ಬಲಿಯನ್ಸ್ ಡ್ರೀಮ್ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಅದರ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಭಾರೀ ಹಿಟ್ ಆಗಿದೆ.
ಈ ಸಿನಿಮಾದಲ್ಲಿ ಸಚಿನ್ ಇದುವರೆಗೆ ಹೇಳಿಕೊಳ್ಳದ ಅವರ ವೈಯಕ್ತಿಕ ಜೀವನದ ಉಲ್ಲೇಖವೂ ಇದೆ ಎಂದು ಸ್ವತಃ ತೆಂಡುಲ್ಕರ್ ಹೇಳಿದ್ದಾರೆ. ಅದರಲ್ಲೂ ವಿಶೇಷವಾಗಿ ಭಾರತ ತಂಡದ ಕರಾಳ ಅಧ್ಯಾಯವೊಂದು ಇದರಲ್ಲಿದೆ.
ಅದುವೇ ಮ್ಯಾಚ್ ಫಿಕ್ಸಿಂಗ್. ಟ್ರೇಲರ್ ನಲ್ಲೇ ಭಾರತೀಯ ಕ್ರಿಕೆಟಿಗರ ಮನೆಗೆ ಕಲ್ಲೆಸೆಯುವ ದೃಶ್ಯಗಳಿವೆ. ಇದು ಭಾರತೀಯ ಕ್ರಿಕೆಟ್ ನ ಅತೀ ಕೆಟ್ಟ ಗಳಿಗೆ ಎನ್ನುವುದು ಸಚಿನ್ ಅಭಿಪ್ರಾಯ. ಹಾಗಾಗಿ ಈ ಸಿನಿಮಾದಲ್ಲಿ ಫಿಕ್ಸಿಂಗ್ ಬಗೆಗೆ ಏನು ಹೇಳಲಾಗಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಸಹಜವಾಗಿಯೇ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ