Select Your Language

Notifications

webdunia
webdunia
webdunia
webdunia

ಅಲೆಸ್ಟರ್ ಕುಕ್ ರನ್ನು ದಾಖಲೆಯ ಬಾರಿಗೆ ಔಟ್ ಮಾಡಿದ ಬೌಲರ್

ಅಲೆಸ್ಟರ್ ಕುಕ್ ರನ್ನು ದಾಖಲೆಯ ಬಾರಿಗೆ ಔಟ್ ಮಾಡಿದ ಬೌಲರ್
Chennai , ಮಂಗಳವಾರ, 20 ಡಿಸೆಂಬರ್ 2016 (12:38 IST)
ಚೆನ್ನೈ: ಅದ್ಯಾಕೋ ಭಾರತದ ವಿರುದ್ದದ ಸರಣಿಯಲ್ಲಿ ಅಲೆಸ್ಟರ್ ಕುಕ್ ಗೆ ಈ ಬೌಲರ್ ಸಿಂಹ ಸ್ವಪ್ನರಾದರು. ಅದು ಬ್ಯಾಟಿಂಗ್ ಪಿಚ್ ಇರಲಿ, ಬೌಲಿಂಗ್ ಪಿಚ್ ಇರಲಿ. ಎಲ್ಲಾ ಪಂದ್ಯಗಳಲ್ಲೂ ಕುಕ್ ಔಟ್ ಮಾಡಿದ ಖ್ಯಾತಿ ಟೀಂ ಇಂಡಿಯಾದ ಈ ಬೌಲರ್ ನದ್ದು.

ಐದು ಪಂದ್ಯಗಳ ಈ ಸರಣಿಯಲ್ಲಿ ಕುಕ್ 12 ಬಾರಿ ಬ್ಯಾಟಿಂಗ್ ಮಾಡಿದ್ದಾರೆ. ಅದರಲ್ಲಿ ಆರು ಬಾರಿ ಅವರ ವಿಕೆಟ್ ಕಿತ್ತ ದಾಖಲೆ ಮಾಡಿದ್ದು ರವೀಂದ್ರ ಜಡೇಜಾ. ಅಂದ ಹಾಗೆ ಜಡೇಜಾ ಈ ರೀತಿ ಒಂದೇ ಸರಣಿಯಲ್ಲಿ ಅತೀ ಹೆಚ್ಚು ಬಾರಿ ಒಬ್ಬ ಬ್ಯಾಟ್ಸ್ ಮನ್ ಔಟ್ ಮಾಡಿದ್ದು ಇದೇ ಮೊದಲಲ್ಲ. 2015 ರ ಆಸ್ಟ್ರೇಲಿಯಾ ಸರಣಿಯಲ್ಲೂ ಮೈಕಲ್ ಕ್ಲಾರ್ಕ್ ರನ್ನ ಐದು ಬಾರಿ ಔಟ್ ಮಾಡಿದ ಹೆಗ್ಗಳಿಕೆ ಅವರಿಗಿದೆ.

ಇದೇ ವೇಳೆ ರವಿಚಂದ್ರನ್ ಅಶ್ವಿನ್ ಕೂಡಾ ಈ ಸರಣಿಯಲ್ಲಿ ಇಂಗ್ಲೆಂಡ್ ವಿಕೆಟ್ ಕೀಪರ್ ಬೇರ್ ಸ್ಟೋ ರನ್ನು ಐದು ಬಾರಿ ಔಟ್ ಮಾಡಿದ್ದಾರೆ. ಆದರೆ ಈ ಪಂದ್ಯದಲ್ಲಿ ಮತ್ತೊಂದು ಬಾರಿ ಔಟ್ ಮಾಡುವ ಚಾನ್ಸ್ ಅವರಿಗೆ ಸಿಗಲಿಕ್ಕಿಲ್ಲ. ಯಾಕೆಂದರೆ ಬೇರ್ ಸ್ಟೋ ಕೆಳ ಕ್ರಮಾಂಕದಲ್ಲಿ ಆಡಲಿಳಿಯುತ್ತಾರೆ. ಅಲ್ಲಿಯವರೆಗೆ ಇಂಗ್ಲೆಂಡ್ ಬ್ಯಾಟಿಂಗ್ ಇರಬಹುದು ಎಂದು ಹೇಳಲಾಗದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಾಕಿಂಗ್! ರಾಬಿನ್ ಉತ್ತಪ್ಪಗೇ ಕೊಕ್ ನೀಡಿದ ಕರ್ನಾಟಕ