Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಮನೆಯಲ್ಲಿ ಕಳ್ಳತನ

ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಮನೆಯಲ್ಲಿ ಕಳ್ಳತನ
Nagpur , ಬುಧವಾರ, 19 ಜುಲೈ 2017 (10:06 IST)
ನಾಗ್ಪುರ: ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಮನೆಗೆ ಕಳ್ಳರು ನುಗ್ಗಿ  ಸಾವಿರಾರು ರೂ. ನಗದು, ಎರಡು ಮೊಬೈಲ್ ಫೋನ್ ದೋಚಿ ಪರಾರಿಯಾಗಿರುವ ಘಟನೆ ನಿನ್ನೆ ಸಂಜೆ ನಡೆದಿದೆ.


ವೇಗಿ ಉಮೇಶ್ ಯಾದವ್ ರ ನಾಗ್ಪುರದಲ್ಲಿರುವ ಫ್ಲ್ಯಾಟ್ ನಲ್ಲಿ ಈ ಘಟನೆ ನಡೆದಿದೆ. ಉಮೇಶ್ ಮತ್ತು ಕುಟುಂಬದವರು ಮನೆಯಲ್ಲಿಲ್ಲದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಮನೆಗೆ ಬಂದ ತಕ್ಷಣ ಕಳ್ಳತನ ನಡೆದಿರುವುದು ತಿಳಿದ ಉಮೇಶ್ ಕುಟುಂಬ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ.

ಸುಮಾರು 45 ಸಾವಿರ ರೂ. ನಗದು ಮತ್ತು ಎರಡು ಮೊಬೈಲ್ ಫೋನ್ ಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ವಿಶೇಷವೆಂದರೆ ಉಮೇಶ್ ಗೆ ನಿನ್ನೆಯಷ್ಟೇ ಕ್ರೀಡಾ ಕೋಟಾದಡಿ ಆರ್ ಬಿಐ ನಲ್ಲಿ ನೌಕರಿ ದೊರೆತಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಫೋಟೋ ಇರ್ಫಾನ್ ಪಠಾಣ್ ಗೆ ತಂತು ಕುತ್ತು